ಅಂತು ಇಂತು ಕಂಪ್ಲಿಯಲ್ಲಿ ಭತ್ತ, ಜೋಳ ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಆರಂಭ

Registration of farmers has started at the paddy and corn buying center in Kampli

ಕಂಪ್ಲಿ:04: ರೈತರ ನಿರಂತರ ಹೋರಾಟ, ಆಗ್ರಹದ ಮೇರೆಗೆ ಜಿಲ್ಲಾಡಳಿತ ಕಂಪ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಭತ್ತ ಹಾಗೂ ಜೋಳ ಖರೀದಿ ಕೇಂದ್ರವನ್ನು ಆರಂಭಿಸಿದ್ದು, ಮಂಗಳವಾರದಿಂದ ರೈತರಿಂದ ನೋಂದಣಿ ಕಾರ್ಯ ಆರಂಭವಾಗಿದೆ. ಕಂಪ್ಲಿ ತಾಲ್ಲೂಕು ಆಹಾರ ನೀರೀಕ್ಷಕ ವಿರೂಪಾಕ್ಷಗೌಡ ಮಾತನಾಡಿ ಕಂಪ್ಲಿ ಪಟ್ಟಣದಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ಜೋಳವನ್ನು ಖರೀದಿ ಮಾಡಲು ಕೇಂದ್ರವನ್ನು ಆರಂಭಿಸಲಾಗಿದೆ. ಪ್ರತಿ ರೈತರಿಂದ ಜೋಳವನ್ನು ಕನಿಷ್ಠ 10 ಕ್ವಿಂಟಲ್,ಗರಿಷ್ಟ 150 ಕ್ವಿಂಟಲ್ ಹಾಗೂ ಭತ್ತವನ್ನು ಒಬ್ಬ ರೈತರಿಂದ ಕನಿಷ್ಠ 10 ಕ್ವಿಂಟಲ್  ಹಾಗೂ ಗರಿಷ್ಠ 50 ಕ್ವಿಂಟಲ್ ಖರೀದಿ ಅವಕಾಶಗಳಿವೆ ಎಂದ ಅವರು ಡಿ.31ರವರೆಗೆ ರೈತರು ಖರೀದಿ ಕೇಂದ್ರದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದೆ ಎಂದರು. 

ಈ ಸಂದರ್ಭದಲ್ಲಿ ಇಲಾಖೆಯ ಡಾಟಾ ಆಪರೇಟರ್ ಪ್ರಶಾಂತ್, ಸಿಬ್ಬಂದಿಗಳಾದ ಮುರುಗೇಶ್, ಸುಕುರುಸ್ವಾಮಿ, ರೈತರು ಇದ್ದರು. ರೈತ ಸಂಘದ ಪದಾಧಿಕಾರಿಗಳ ಅಮಸಧಾನಃ- ಜಿಲ್ಲಾಡಳಿತ ಕಂಪ್ಲಿ ಪಟ್ಟಣದಲ್ಲಿ ಆರಂಭಿಸಿರುವ ಭತ್ತ ಹಾಗೂ ಜೋಳ ಖರೀದಿ ಕೇಂದ್ರದ ಬಗ್ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಹಾಗೂ ಪದಾಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದರು. ರೈತರು ಒಂದು ಎಕರೆಗೆ ಕನಿಷ್ಠವೆಂದರೂ 30 ರಿಂದ 35 ಕ್ವಿಂಟಲ್ ಭತ್ತ ಬೆಳೆಯುತ್ತಾರೆ. ಸರ್ಕಾರ ಕೇವಲ 50 ಕ್ವಿಂಟಲ್ ನಿಗಧಿ ಪಡಿಸಿದರೆ 2 ಎಕರೆ ಜಮೀನಿರುವ ರೈತ ಉಳಿದ 10-12 ಕ್ವಿಂಟಲ್ ಭತ್ತವನ್ನು ಎಲ್ಲಿ ಮಾರಬೇಕು, ಹಾಗೂ 4 ಎಕರೆ ಇದ್ದ ರೈತ ತಾನು ಬೆಳಿದಿರುವ 140 ಕ್ವಿಂಟಲ್ ಭತ್ತದಲ್ಲಿ 50 ಕ್ವಿಂಟಲ್ ಖರೀದಿ ಕೇಂದ್ರದಲ್ಲಿ ಮಾರಿದರೆ ಉಳಿದ 70 ಕ್ವಿಂಟಲ್ ಭತ್ತವನ್ನು ಎಲ್ಲಿ ಮಾರಬೇಕೆಂದು ಪ್ರಶ್ನಿಸಿದ ಅವರು ಅದರಲ್ಲೂ ಈಗಾಗಲೇ ಸುಮಾರು 40 ರಷ್ಟು ರೈತರು ಭತ್ತವನ್ನು ಕಟಾವು ಮಾಡಿ ಕನಿಷ್ಠ ಬೆಲೆಗೆ ಮಾರಾಟ ಮಾಡಿದ್ದಾರೆ. ಈಗ ಖರೀದಿ ಕೇಂದ್ರ ಆರಂಭಿಸಿ ಡಿಸೆಂಬರ್ ಅಂತ್ಯದವರೆಗೂ ಕೇವಲ ನೋಂದಣಿಗೆ ಅವಕಾಶ ನೀಡಿದರೆ ಅದನ್ನು ರೈತ ಮಾರಾಟ ಮಾಡುವುದು ಯಾವಾಗ, ಮುಂದಿನ ಬೆಳೆಗೆ ರೈತರ ಬೀಜ, ಗೊಬ್ಬರ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸುವುದು ಯಾವಾಗ ಎಂದು ಪ್ರಶ್ನಿಸಿದರು. ಜೊತೆಗೆ ಷರತ್ತು ರಹಿತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.