‘ಸಾಮಾಜಿಕ ಅಂತರ’ ಮತ್ತು ‘ಮನೆಯಿಂದಲೇ ಕೆಲಸ’ಕ್ಕೆ ರೆಡ್‍ ಎಫ್‌ಎಂ ಪ್ರೋತ್ಸಾಹ

ಕೋಲ್ಕತಾ, ಮಾರ್ಚ್ 26, ಭಾರತದ ಅತಿದೊಡ್ಡ ಮತ್ತು ಹೆಚ್ಚು ಪ್ರಶಸ್ತಿ ಪಡೆದ ಖಾಸಗಿ ರೇಡಿಯೊ ವಾಹಿನಿಗಳಲ್ಲಿ  ಒಂದಾದ ’93.5 ರೆಡ್‍ ಎಫ್‍ಎಂ’ ‘ಕೇರ್ ಕರೋನಾ’ ಎಂಬ ರಾಷ್ಟ್ರೀಯ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದು. ಕೊರೊನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜನರು ಸಾಮಾಜಿಕ ಅಂತರ ಅಭ್ಯಾಸ ಮಾಡುವಂತೆ ಮತ್ತು ಮನೆಗಳಲ್ಲೇ ಇರುವಂತೆ ಕೋರಿದೆ. ಅಲ್ಲದೆ, ಸೃಜನಶೀಲ ಚಿತ್ರಣದೊಂದಿಗೆ ತನ್ನ ಲೋಗೊ ಬದಲಾಯಿಸಿರುವ ರೆಡ್‍ ಎಫ್‍ಎಂ, ಸಾಮಾಜಿಕ ಅಂತರದ ಮಹತ್ವವನ್ನು ಒತ್ತಿಹೇಳಿದೆ. ಮಹತ್ವದ ಈ ಅವಧಿಯಲ್ಲಿ ಅಧಿಕೃತ ಮಾಹಿತಿಯನ್ನು ತಲುಪಿಸಲು ರೆಡ್‍ ಎಫ್‍ಎಂ ‘ಕೇರ್ ಕೊರೋನ’ ಉಪಕ್ರಮವನ್ನು ಆರಂಭಿಸಿದ್ದು,ಇದು ಪ್ರಸಾರ ಮತ್ತು ಡಿಜಿಟಲ್ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.  ಅಲ್ಲದೆ, ರೆಡ್‍ ಎಫ್‍ ಸೃಜನಾತ್ಮಕ ಸಂವಹನ ಮತ್ತು ಸಾಮಾಜಿಕ ದೂರ  ಮತ್ತು ಮನೆಯಿಂದ ಕೆಲಸವನ್ನು ಬೆಂಬಲಿಸುವ ಜಾಹೀರಾತುಗಳನ್ನು ಹೊರತಂದಿದೆ. ಸಂಸ್ಥೆಯ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸುವುದರೊಂದಿಗೆ ಸಂಸ್ಥೆ ಎಂದಿನಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.