ಕೊರೊನಾ ವಿರುದ್ಧ ಸೆಣಸಿ ಪುನರ್ ಜನ್ಮ ಪಡೆದ ವೃದ್ಧರು...!!

ಕಲಬುರಗಿ, ಮೇ.27,ಸೂರ್ಯ ನಗರಿ ಕಲಬುರಗಿಯಲ್ಲಿ 80 ವರ್ಷದ ವೃದ್ಧರಿಬ್ಬರು ಕರೋನ ವಿರುದ್ದವೇ ಸೆಣಸಿ, ಗೆದ್ದು  ಪುನರ್ ಜನ್ಮ ಪಡೆದಿದ್ದಾರೆ..!!.ಕಲಬುರಗಿ ಜಿಲ್ಲೆಯಲ್ಲಿ 80 ವರ್ಷದ ಇಬ್ಬರೂ ಹಿರಿಯ ಜೀವಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಕಲಬುರಗಿ ನಗರದ ಸರಫ್ ಬಜಾರ್  ಪ್ರದೇಶದ 80 ವರ್ಷದ ವೃದ್ಧೆ (ರೋಗಿ ಸಂಖ್ಯೆ -983) ಹಾಗೂ ಅಫಜಲಪೂರ ತಾಲೂಕಿನ ಅಳಗಿ (ಬಿ) ಗ್ರಾಮದ 80 ವರ್ಷದ ವೃದ್ಧ (ರೋಗಿ ಸಂಖ್ಯೆ-1039) ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದವರು ಎಂದು ಅವರು ಹೇಳಿದರು. ಸದ್ಯ ಕೊರೊನಾ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. ಈವರೆಗೆ 7 ಜನ ಮೃತಪಟ್ಟಿದ್ದು  103 ಜನರಿಗೆ ಚಿಕಿತ್ಸೆ ಮುಂದುವರೆರೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.