ಜಮ್ಮು, ಫೆ 03, ಸೇನಾ ಹೆಲಿಕಾಪ್ಟರ್ ಸೋಮವಾರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ತುರ್ತು ನಿಲುಗಡೆಯಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ "ಸೇನೆಯ ಚೀತಾ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಉಧಂಪುರದಿಂದ ತನ್ನ ಗಮ್ಯಸ್ಥಾನಕ್ಕಾಗಿ ಹೊರಟಿತು ಆದರೆ ತಾಂತ್ರಿಕ ಅಡಚಣೆಗಳಿಂದಾಗಿ ತುರ್ತು ನಿಲುಗಡೆಯಾಗಿದೆ” ಎಂದು ರಕ್ಷಣಾ ಮೂಲಗಳು ತಿಳಿಸಿವೆ. ರಿಯಾಸಿಯ ಖಾದ್ ಪ್ರದೇಶದ ಬಳಿ ಹೆಲಿಕಾಪ್ಟರ್‌ನ ತುರ್ತು ಲ್ಯಾಂಡಿಂಗ್ ಮಾಡಲಾಗಿದ್ದು, "ಪೈಲಟ್ ಮತ್ತು ಸಹ ಪೈಲಟ್ ಇಬ್ಬರೂ ಸುರಕ್ಷಿತರಾಗಿದ್ದಾರೆ. "ಹೆಲಿಕಾಪ್ಟರ್ ಅನ್ನು ದುರಸ್ತಿ ಮಾಡಲಾಗುತ್ತಿದೆ" ಎಂದು ಮೂಲಗಳು ತಿಳಿಸಿವೆ.