ಉದ್ಯಮಗಳ ಆಗತ್ಯ ತಕ್ಕಂತೆ ವಿದ್ಯಾರ್ಥಿಗಳ ಸಿದ್ದಪಡಿಸಲು ಪಠ್ಯ, ಬೋಧನಾ ವಿಧಾನ ಮರು ಹೊಂದಾಣಿಕೆ ಆಗತ್ಯ; ಉಪ ರಾಷ್ಟ್ರಪತಿ

ತಿರುಚ್ಚಿ, ಜ 11,ಉದ್ಯಮಗಳ ಆಗತ್ಯಕ್ಕೆ  ತಕ್ಕಂತೆ  ಶೈಕ್ಷಣಿಕ ಸಂಸ್ಥೆಗಳು  ವಿದ್ಯಾರ್ಥಿಗಳಿಗೆ  ಸೂಕ್ತ ತರಬೇತಿ  ಕಲ್ಪಿಸಲು   ಪಠ್ಯ ಹಾಗೂ  ಬೋಧನಾ ವಿಧಾನವನ್ನು ತುರ್ತಾಗಿ ಮರು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಆಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು  ಶನಿವಾರ ಹೇಳಿದ್ದಾರೆ.  ತಂತ್ರಜ್ಞಾನ ಪ್ರೇರಿತ  21 ನೇ ಶತಮಾನದಲ್ಲಿ ಸ್ಪರ್ಧಾತ್ಮಕ ಜಗತ್ತನ್ನು   ಸಮರ್ಥವಾಗಿ ಎದುರಿಸಿ ಉದ್ಯೋಗ ಪಡೆದುಕೊಳ್ಳುವಂತಹ,   ಉದ್ಯಮಶೀಲ ಕೌಶಲ್ಯಗಳನ್ನು  ಶಿಕ್ಷಣ ಸಂಸ್ಥೆಗಳಿಂದ   ಹೊರಬರುವ ವಿದ್ಯಾರ್ಥಿಗಳು ಹೊಂದುವುದು ಆಗತ್ಯ ಎಂದು   ಅವರು ಹೇಳಿದ್ದಾರೆ.ಶ್ರೀಮದ್‌ ಅಂಡವಾನ್  ಕಲೆ  ಮತ್ತು  ವಿಜ್ಞಾನ ಕಾಲೇಜಿನ  21 ನೇ ಘಟಿಕೋತ್ಸವದಲ್ಲಿ  ಪಾಲ್ಗೊಂಡು  ಪದವಿ ಪ್ರದಾನ ಮಾಡಿದ ನಂತರ   ಉಪರಾಷ್ಟ್ರಪತಿ ಮಾತನಾಡುತ್ತಿದ್ದರು.

ಶಿಕ್ಷಣ ವಿದ್ಯಾರ್ಥಿಗಳ  ಸಂಪೂರ್ಣ ವ್ಯಕ್ತಿತ್ವವನ್ನುಅಭಿವೃದ್ದಿಪಡಿಸಬೇಕು ಎಂದು   ಅವರು ಅಭಿಪ್ರಾಯಪಟ್ಟರು.ದೇಶದ ಜನಸಂಖ್ಯೆಯಲ್ಲಿ  ಯುವಜನರು ಹೆಚ್ಚಿನ ಪ್ರಮಾಣದಲ್ಲಿದ್ದು,  ಈ ಸಂಪನ್ಮೂಲದ   ಸದುಪಯೋಗಕ್ಕೆ ಪ್ರತಿಯೊಂದು ಕಾಲೇಜು, ಶಿಕ್ಷಣ ಸಂಸ್ಥೆಗಳು   ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ  ಗಮನ ಹರಿಸಬೇಕು ಎಂದು  ಸಲಹೆ ನೀಡಿದರು.ಕೌಶಲ್ಯ ಅಭಿವೃದ್ದಿಗೆ ಹೆಚ್ಚಿನ ಹೊತ್ತು ನೀಡಿ, ಕೈಗಾರಿಕೆಗಳಲ್ಲಿ  ಕಾರ್ಯನಿರ್ವಹಿಸುವ  ಮೊದಲ ಅನುಭವ ಕಲ್ಪಿಸಲು ಕೈಗಾರಿಕೆಗಳೊಂದಿಗೆ ವಿದ್ಯಾರ್ಥಿಗಳ ಸಂಪರ್ಕ ಸ್ಥಾಪಿಸಬೇಕು.   ಸ್ವಾವಲಂಭಿಯಾಗಿ ಬದುಕಲು ಔದ್ಯೋಗಿಕ   ಸ್ಪೂರ್ತಿಯನ್ನು ವಿದ್ಯಾರ್ಥಿಗಳಲ್ಲಿ  ಬಿತ್ತಬೇಕು   ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಒಳ್ಳೆಯತನವನ್ನು  ರೂಪಿಸಿ,   ಮನಸ್ಸು ಬಲಿಷ್ಠಗೊಳಿಸುವಂತಹ  ಶಿಕ್ಷಣ ಕಲ್ಪಿಸಿದಾಗ  ಮಾತ್ರ  ಬೌದ್ದಿಕತೆ ವಿಸ್ತರಣೆಗೊಳ್ಳಲಿದೆ ಇದರಿಂದ  ವ್ಯಕ್ತಿ  ತನ್ನಕಾಲಮೇಲೆ ತಾನೇ ನಿಲ್ಲಬಲ್ಲ ಎಂದರು.ಶಿಕ್ಷಣದ ಆರ್ಥ   ಜ್ಞಾನೋದಯ, ಜ್ಞಾನದ ವರ್ಧನೆ,ಸಬಲೀಕರಣ ಮತ್ತು ಉದ್ಯೋಗ ಎಂದು ವಿವರಿಸಿದ  ವೆಂಕಯ್ಯ  ನಾಯ್ಡು  ಜೀವನದ ಸವಾಲುಗಳನ್ನು ಎದುರಿಸಲು   ಹೆಚ್ಚುವರಿ ಜೀವನ ಕೌಶಲ್ಯಗಳೊಂದಿಗೆ  ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದರುತಿಳುವಳಿಕೆಯುಳ್ಳ ಆಯ್ಕೆಗಳನ್ನು ಆಯ್ದುಕೊಂಡು,  ಸಾಮಾಜಿಕ ಲಾಭಗಳಿಗೆ  ಶ್ರಮಿಸಲು ಜನರನ್ನು ಸಭಲೀಕರಣಗೊಳಿಸುವುದು ಆಗತ್ಯ ಉಪರಾಷ್ಟ್ರಪತಿ ಹೇಳಿದರು.