ಮದಲಗಟ್ಟಿ ಆಂಜನೇಯ ಸ್ವಾಮಿಯ ರಥೋತ್ಸವ
ಹೂವಿನ ಹಡಗಲಿ 16: ತಾಲೂಕಿನ ಮೊದಲಘಟ್ಟ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ಸಂಜೆ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.ಇದಕ್ಕೂ ಮೊದಲು ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ತಂದು, ರಥಕ್ಕೆ ಪ್ರದಕ್ಷಣೆ ಹಾಕಿಸಿ, ನಂತರ ರಥದಲ್ಲಿ ಸ್ವಾಮಿಯ ಮೂರ್ತಿ ಇರಿಸಲಾಯಿತು. ಪಟಾಕ್ಷಿ ಹರಾಜು ನಂತರ ರಥೋತ್ಸವ ನಡೆಯಿತು. ಸಾಗುತ್ತಿರುವ ರಥಕ್ಕೆ ಭಕ್ತರು ಬಾಳೆಹಣ್ಣು- ಉತ್ತತ್ತಿ ಸಮರ್ಿಸಿದರು. ತಾಲೂಕು ಸೇರಿ ಮುಂಡರಗಿ, ಗದಗ, ಕೊಪ್ಪಳ. ಶಿರಹಟ್ಟಿ ಮುಂತಾದ ತಾಲೂಕಿನ ಭಕ್ತರು ಪಾಲ್ಗೊಂಡಿದ್ದರು. ಅನೇಕ ಭಕ್ತರು ಹರಕೆ ತೀರಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು.