ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ಕೊಡಿ : ನಾಗರತ್ನ ಮನಗೂಳಿ

ಮಕ್ಕಳಿಗೆ ಶಿಕ್ಷಣ ಜೊತೆ ಸಂಸ್ಕಾರ ಕೊಡಿ : ನಾಗರತ್ನ ಮನಗೂಳಿ Give children education along with culture: Nagaratna Managuli


ಆಲಮೇಲ 12 : ತಾಲೂಕಿನ ಕಡಣಿ ಸಮೀಪ  ನೂತನ ಶ್ರಾವಣಿ ಪಬ್ಲಿಕ್ ಸ್ಕೂಲ್ ಉದ್ಘಾಟಿಸಿ ಮಾತನಾಡಿದ ಶಾಸಕರ ಧರ್ಮಪತ್ನಿ ನಾಗರತ್ನ ಮನಗೂಳಿ ಇಂದಿನ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಉತ್ತಮವಾದ ಸಂಸ್ಕಾರವನ್ನು ನೀಡುವುದು ಅತಿ ಮುಖ್ಯವಾಗಿದೆ. 

 ತಾಯಂದಿರು ಮೊಬೈಲ್ ಮತ್ತು ಟಿವಿ ಹಾಗೂ ಧಾರವಾಹಿಗಳನ್ನು ಹೊರತುಪಡಿಸಿ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಡಗಬೇಕು ಇದು ಪಾಲಕರ ಕರ್ತವ್ಯ. ನಮ್ಮ ಮಕ್ಕಳು ಕೂಡ ಗೌರ್ಮೆಂಟ್ ಶಾಲೆಯಲ್ಲಿ ಕಲಿತು ಇವತ್ತಿನ ದಿವಸ ಹೈಕೋರ್ಟಿನಲ್ಲಿ ಲಾಯರ ಮತ್ತು ಡಾಕ್ಟರ್ ಗಳಾಗಿದ್ದಾರೆ ಅನೇಕ ರೈತರ ಮಕ್ಕಳು ಕೂಡ ಡಿಸಿ ಆಗಿದ್ದು ಉದಾರಣೆಗಳಿವೆ. ಅದರಿಂದ ಹೆಚ್ಚು ರೈತರ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ತಾಯಂದಿರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದರಲ್ಲಿ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.  

ಸಾನಿಧ್ಯ. ಶ್ರೀ. ಷ. ಬ್ರ.ಗುರುಲಿಂಗ ಶಿವಾಚಾರ್ಯರು ತಾರಾಪುರ ಹಿರೇಮಠ ಆಲಮೇಲ. ಷ ಬ್ರ ಚಂದ್ರಶೇಖರ್ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ಆಲಮೇಲ. ಷ. ಬ್ರ.ಸಿದ್ದರಾಮ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಕಲಿಕೇರಿ. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಡಾ. ಮಲ್ಲು ಪ್ಯಾಟಿ ವೈದ್ಯರು ನಿರ್ದೇಶಕರು ಗ್ಯಾರಂಟಿ ಯೋಜನೆಯ ಆಲಮೇಲ ತಾಲೂಕು. ಗೌರವಧ್ಯಕ್ಷರು ವೇದಮೂರ್ತಿ ಸಿದ್ದಯ್ಯ ಹಿರೇಮಠ್‌.ಫೋಟೋ ಪೂಜೆ ಶ್ರೀ ಬಸವರಾಜ ಬಾಗೇವಾಡಿ ಅಧ್ಯಕ್ಷರು ಎಪಿಎಂಸಿ ಅಲಮೇಲ ನೆರವೇರಿಸಿದರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ್ ಜೋಗುರ ಬಿಜೆಪಿ ಮುಖಂಡರ ಹಾಗೂ ನಿರ್ದೇಶಕರ ಕೆಪಿಆರ್ ಸಕ್ಕರೆ ಕಾರ್ಖಾನೆ ಆಲಮೇಲ.

ಅವಧೂತ ಬಂಡಗಾರ ಅಧ್ಯಕ್ಷರು ಕಾ.ನಿ. ಪ. ಆಲಮೇಲ. ಲಕ್ಷ್ಮಿಪುತ್ರ ಲಾಳಸಂಗಿ  ಪ್ರಮಾನಂದ ಭೋಲಿಂಗೇಶ್ವರ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕರು. ದೇವರಾಯ ತಾವರಗೇರಿ ಅಧ್ಯಕ್ಷರು ಕುಡ ಒಕ್ಕಲಿಗರ ಕ್ಷೇಮಾಭಿವೃಧಿ ಸಂಘ ಕಡಣಿ. ಈರಣ್ಣ ಸುತಾರ್ ಯುವ ಮುಖಂಡರು ಕಡಣಿ. ಅಂಬಣ್ಣ ತಳಕೇರಿ ಶಿಕ್ಷಕರು ಎಂಪಿಎಸ್ ಆಲಮೇಲ. ನಬಿರಾಸನ ವಾಡೆದ್ ಅಧ್ಯಕ್ಷರು ಅಂಜುಮನ್ ಇಸ್ಲಾಂ ಕಮಿಟಿ ಕಡಣಿ. ವಿದ್ಯಾರ್ಥಿಗಳು ಮಹಿಳೆಯರು ಯುವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ವಾಗತ ವೇದಮೂರ್ತಿ ಶರಣಯ್ಯ ಹಿರೇಮಠ ಶ್ರಾವಣಿ ಪಬ್ಲಿಕ್ ಸ್ಕೂಲ್ ಅಧ್ಯಕ್ಷರು ಕಡಣಿ.ನಿರೋಪಣೆ ನಾಗರಾಜ ಬಸಗೊಂಡ  ಸಾಯಬಣ್ಣ ತಾವರಗೇರಿ ನೆರವೇರಿಸಿದರು.