ದುಬೈ, ಸೆ 22 ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಡಿರಜ್ಜು(ಸ್ನಾಯುಸೆಳೆತ) ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರು ತ್ರಿಕೋನ ಸರಣಿಯ ಫೈನಲ್ ಹಣಾಹಣಿಗೆ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.
ಎಡಗಾಲು ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ರಶೀದ್ ಖಾನ್ ಸಂಪೂರ್ಣ ಗುಣಮುಖರಾಗಲು ಇನ್ನೂ ಎರಡು ಮೂರು ದಿನಗಳ ಅಗತ್ಯವಿದೆ ಎಂದು ತಂಡದ ವ್ಯವಸ್ಥಾಪಕ ನಾಜೀಮ್ ಜಾರ್ ಅಬ್ದೂರ್ ಝಾಯ್ ಹೇಳಿದ್ದಾರೆ.
" ತ್ರಿಕೋನ ಸರಣಿಯ ಫೈನಲ್ಗೆ ಅವರು ಲಭ್ಯರಾಗುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆಯಿಲ್ಲ. ಮುಂದೇನಾಗಲಿದೆ ಎಂದು ಕಾದು ನೋಡಬೇಕಾಗಿದೆ. ಅವರಿನ್ನೂ ಗುಣಮುಖರಾಗಲು ಎರಡರಿಂದ ಮೂರು ದಿನಗಳ ಅಗತ್ಯವಿದೆ ಎಂದು ಅವರು ಹೇಳಿರುವುದನ್ನು ಐಸಿಸಿ ವರದಿ ಮಾಡಿದೆ.
"ನನಗೆ ತಳಿದ ಹಾಗೆ ರಶೀದ್ಗೆ ಆಗಿರುವುದು ಗಂಭೀರ ಗಾಯವೇನಲ್ಲ. ಅವರು ನಮ್ಮ ತಂಡದ ನಾಯಕ, ಮುಖ್ಯ ಆಟಗಾರ ಅವರು ಫೈನಲ್ ಪಂದ್ಯದಲ್ಲಿ ಅಂಗಳದಲ್ಲಿ ನೋಡಲು ಬಯಸುತ್ತೇನೆ.
21ರ ಪ್ರಾಯದ ಸ್ಪಿನ್ ಆಲ್ರೌಂಡರ್ ರಶೀದ್ ಖಾನ್ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಎಂಟನೇ ಓವರ್ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಆಡಿದ ನಾಲ್ಕು ಪಂದ್ಯಗಳಲ್ಲಿ ಜಿಂಬಾಬ್ವೆ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಹಾಗಾಗಿ, 24 ರಂದು ನಡೆಯುವ ಫೈನಲ್ನಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಸೆಣಸಲಿವೆ.