ಶಿಗ್ಗಾವಿ ೧೦: ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೆರೆ ತುಂಬಿ ನೀರು ಮನೆಗಳಿಗೆ ನುಗ್ಗಿದ್ದರಿಂದ ಆಕ್ರೋಶಗೊಂಡ ಗ್ರಾಮದ ಜನತೆ ದಿಢೀರ್ ಗ್ರಾಮ ಪಂಚಾಯತಿ ಎದುರಿಗೆ ಪ್ರತಿಭಟಿಸಿದ ಘಟನೆ ಬುಧುವಾರ ಬೆಳಿಗ್ಗೆ ಜರುಗಿತು.
ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರಗಳನ್ನ ಸೃಷ್ಠಿಸುತ್ತಿದ್ದು ಜನತೆ ಹೈರಾಣಾಗಿದ್ದಾರೆ, ಅದೇ ರೀತಿ ತಾಲೂಕಿನ ಕ್ಯಾಲಕೊಂಡ ಗ್ರಾಮದ ಸುತ್ತ ಮುತ್ತಲು ಮಂಗಳವಾರ ರಾತ್ರಿ ಸುರಿದ ಮಳೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ತುಂಬಿ ಚರಂಡಿಯಲ್ಲಿ ಹರಿಯದೆ ಕೆರೆಯ ಅಕ್ಕ ಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿದ್ದರಿಂದ ಭಯಬೀತರಾಗಿ ರಾತ್ರಿಪೂರ ನಿದ್ದೆ ಇಲ್ಲದೇ ರಾತ್ರಿಯನ್ನು ಕಳೆದ ಜನತೆ ಪಂಚಾಯತಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು.
ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆಯಿಂದ ಪಂಚಾಯತಿಗೆ ಗಮನಕ್ಕೆ ತಂದರೂ ಸಹಿತ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಹಾಗೂ ಪಂಚಾಯತಿಯ ಜನಪ್ರತಿನಿಧಿಗಳು ಬುಧುವಾರ ಬೆಳಿಗ್ಗೆ ಘಟನೆಗೆ ಸಂಭಂದಿಸಿದಂತೆ ಅಧ್ಯಕ್ಷರನ್ನ ತರಾಟೆಗೆ ತೆಗೆದುಕೊಂಡ ಗ್ರಾಮದ ಜನೆತೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯ ನಂತರ ಗ್ರಾಪಂ ಅಧ್ಯಕ್ಷೆ ಶಾರದಾ ಬಾಳಿಕಾಯಿ ನೇತೃತ್ವದಲ್ಲಿ ನಡೆದ ಸಭೆಯಅಲ್ಲಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಈ ಅ ಪೂಲ್ ನಿರ್ಮಾಸಲು ಎಷ್ಟಿಮೇಂಟ್ ಮಾಡಿ ಕಳಿಸುವ ಕುರಿತು ಸಭೆಯಲ್ಲಿ ಚರ್ಚಿಯಾಯಿತೇ ವಿನಹ ನೀರು ನುಗ್ಗಿ ಹಾನಿಯಾದ ಕುರಿತು ಪರಿಹಾರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ಯಾಗಲೇ ಇಲ್ಲ.
ಕ್ಯಾಲಕೊಂಡ ಪಂಚಾಯತಿಗೆ ಸಂಭಂದಿಸಿದಂತೆ ಇತ್ತೀಚೆಗೆ ವಿತರಣೆಯಾದ ನೆರೆ ಪರಿಹಾರವು ಸಹಿತ ಸರಿಯಾಗಿ ವಿತರಣೆಯಾಗಿಲ್ಲ, ಮನೆ ಎರಡು ಗೊಡೆಗಳು ಬಿದ್ದರೂ ಕೇವಲ 10 ಸಾವಿರಗಳ ಪರಿಹಾರ ನೀಡಲಾಗಿದೆ ಎಂಬ ಆರೋಪವು ಸಹಿತ ಕೇಳಿಬಂದಿತು.
ವರದಿಗಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ತಾಲೂಕಾ ಕಾರ್ಯನಿವರ್ಾಹಕ ಅಧಿಕಾರಿ ಪ್ರಕಾಶ ತುರಕಾಣಿ ಕೆರೆಯ ಕಾರ್ಯವನ್ನು ಲ್ಯಾಂಡ್ ಆಮರ್ಿಯವರು ಮಾಡಿದ್ದು ಈ ಕುರಿತು ಸಮಸ್ಯೆಗೆ ಏಂಜಿನಿಯರು ಸ್ಪಂದಿಸಿದ್ದು ಕೂಡಲೇ ಜೆಸಿಬಿಯಿಂದ ನೀರನ್ನು ಸರಾಗವಾಗಿ ಮುಂದೆ ಹರಿಯಲು ಅನುವು ಮಾಡಿ ಕೊಡಲಾಗಿದೆ ನಂತರ ಎಷ್ಟಿಮೆಂಟ್ ಮಾಡಿ ಪೂಲ್ ನಿರ್ಮಾನಿಸಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡರಾದ ಗದಿಗೆಪ್ಪ ಮಲ್ಲಾಪೂರ, ಮೌಲಾಸಾಬ್ ಭಾಗವಾನ್, ಮಾರುತಿ ಪವಾರ, ನಾಗಪ್ಪ ಗೋಣೆಪ್ಪನವರ, ಶಿವಪ್ಪ ಚೋಟಪ್ಪನವರ, ಮಾಂತೇಶ ಮುಶಮ್ಮನವರ, ಮಹಮ್ಮದಹನೀಪ ಭಾಗವಾನ್, ರವಿ ಪಾಟೀಲ, ಶರೀಫ್ ನದಾಫ್, ಯಲ್ಲಪ್ಪ ಚಾಕಲಬ್ಬಿ, ಲಾಲ್ಸಾಬ್ ಹೊಸಪೇಟಿ, ಮಾಲತೇಶ ಮಲ್ಲಾಪೂರ, ಖಾದರ್ಸಾಬ್ ಹೊಸಪೇಟೆ, ಗೂಡನಸಾಬ್ ಮಂಡಕ್ಕಿ ಸೇರಿದಂತೆ ನೊಂದ ಗ್ರಾಮದ ಜನತೆ ಭಾಗವಹಿಸಿದ್ದರು.