ಪಾಟ್ನಾ, ಜ ೨೨ : ರಾತ್ರಿ ವೇಳೆ ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಹೆಚ್ ಐ ವಿ ಬಾಧಿತೆ ಮಹಿಳೆ(೨೨)ಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ನಡೆಸಿರುವ ಧಾರುಣ ಘಟನೆ ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ಬಭುವಾದ ಬಳಿ ರೈಲಿನಲ್ಲಿ ನಡೆದಿದೆ.
ಪಾಟ್ನಾ- ಬಭುವಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ರಾತ್ರಿ ಒಂಟಿಯಾಗಿ ೨೨ ವರ್ಷದ ಎಚ್‌ಐವಿ ಸೋಂಕಿತ ಮಹಿಳೆ ಪ್ರಯಾಣಿಸುತ್ತಿದ್ದಳು. ಮಾರ್ಗ ಮಧ್ಯೆ ರೈಲು ಹತ್ತಿದ ಚೈತ್ಯ ಗ್ರಾಮದ ಬೀರೇಂದ್ರಪ್ರಕಾಶ್ ಸಿಂಗ್ (೨೬) ಮತ್ತು ದೀಪಕ್ ಸಿಂಗ್ ಎಂಬ ಯುವಕರು ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಗಮನಿಸಿದರು.
ಈ ಪೈಕಿ ಒಬ್ಬ ಆಕೆಯ ಮೇಲೆ ಒಬ್ಬ ಅತ್ಯಾಚಾರ ನಡೆಸಿದ್ದು, ಮತ್ತೊಬ್ಬ ಯುವಕ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಿಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಎಸ್ ಐ ಲಾಲುಸಿಂಗ್ ಹೇಳಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ಬಭುವ ಸದರ್ ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ ಐ ವಿ ಪೀಡಿತ ಮಹಿಳೆಯ ಪತಿ ಏಡ್ಸ್ ನಿಂದ ಸಾವನ್ನಪ್ಪಿದ್ದು, ಆಕೆ ಚಿಕಿತ್ಸೆಗಾಗಿ ಪಾಟ್ನಾಕ್ಕೆ ತೆರಳುತ್ತಿದ್ದಳು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.