ರಣಜಿ ಟ್ರೋಫಿ: ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 331 ರನ್ ಗುರಿ ನೀಡಿದ ಕರ್ನಾಟಕ

ಜಮ್ಮು, ಫೆ 24,ಪ್ರಸ್ತುತ ನಡೆಯುತ್ತಿರುವ 2019/20ನೇ ಸಾಲಿನ ಸರಣಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದ್ದು, ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 331 ಸವಾಲಿನ ಗುರಿ ನೀಡಿದೆ.ಇಲ್ಲಿನ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜಿನಲ್ಲಿ ಐದನೇ ದಿನವಾದ ಇಂದು ಬೆಳಗ್ಗೆ ನಾಲ್ಕು ವಿಕೆಟ್ ಕಳೆದುಕೊಂಡು 245 ರನ್ ಗಳೊಂದಿಗೆ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ 106.5 ಓವರ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 330 ರನ್ ಗಳಿಸಿದ್ದು, ಆತಿಥೇಯ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 331 ರನ್ ಗುರಿ ನೀಡಿದೆ.

ನಾಲ್ಕನೇ ದಿನ ಅರ್ಧಶತಕ ಸಿಡಿಸಿದ್ದ ಕೆ.ವಿ ಸಿದ್ಧಾರ್ಥ್ ಇಂದು ಕೇವಲ ಎರಡು ರನ್ಗಳ ಅಂತರದಲ್ಲಿ ಶತಕ ವಂಚಿತರಾದರು. 177 ಎಸೆತಗಳನ್ನು ಎದುರಿಸಿದ್ದ ಅವರು ಎರಡು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ 98 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಶತಕದಂಚಿನಲ್ಲಿ ಅವರು ಅಬಿದ್ ಮುಷ್ತಾಕ್ ಅವರಿಗೆ ವಿಕೆಟ್ ಒಪ್ಪಿಸಿದರು.ಕೆ.ವಿ ಸಿದ್ಧಾರ್ಥ್ ಜತೆ ಕೆಲ ಕಾಲ ಅತ್ಯುತ್ತಮ ಬ್ಯಾಟಿಂಗ್ ಶರತ್ ಶ್ರೀನಿವಾಸ್ 34 ರನ್ ಗಳಿಸಿ ತಂಡಕ್ಕೆ ಅಳಿಲು ಸೇವೆ ಸಲ್ಲಿಸಿದರು. ಇನ್ನುಳಿದಂತೆ ಕೆ.ಗೌತಮ್ ಕೇವಲ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.ಜಮ್ಮು ಮತ್ತು ಕಾಶ್ಮೀರ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಅಬಿದ್ ಮುಷ್ತಾಕ್ 83 ರನ್ ನೀಡಿ ಆರು ವಿಕೆಟ್ ಪಡೆದರು. ಪರ್ವೇಜ್ ರಸೂಲ್ 88 ರನ್ ನೀಡಿ ಮೂರು ವಿಕೆಟ್ ಕಿತ್ತರು. ಇನ್ನುಳಿದ ಒಂದು ವಿಕೆಟ್ ಅನ್ನು ಮುಜ್ತಾಬ್ ಯೂಸಫ್ ಪಡೆದರು.ಸಂಕ್ಷಿಪ್ತ ಸ್ಕೋರ್ಕರ್ನಾಟಕಪ್ರಥಮ ಇನಿಂಗ್ಸ್: 206ದ್ವಿತೀಯ ಇನಿಂಗ್ಸ್: 106.5 ಓವರ್ಗಳಿಗೆ 316/10 (ಕೆ.ವಿ ಸಿದ್ಧಾರ್ಥ್ 98, ಶರತ್ ಶ್ರೀನಿವಾಸ್ 34; ಅಬಿದ್ ಮುಷ್ತಾಕ್ 83/6, ಪರ್ವೇಜ್ ರಸೂಲ್ 88 ಕ್ಕೆ 3)ಜಮ್ಮು ಮತ್ತು ಕಾಶ್ಮೀರಪ್ರಥಮ ಇನಿಂಗ್ಸ್: 192