ರಾಣಿಚೆನ್ನಮ್ಮ ವಿಶ್ವವಿದ್ಯಾಲಯ: ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 06: ಇಲ್ಲಿನ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ  ಅಪರಾಧಶಾಸ್ತ್ರ ಮತ್ತು ಅಪರಾಧ ನ್ಯಾಯಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ದಶಮಾನೋತ್ಸವವನ್ನು ಈ ವರ್ಷ ಆಚರಿಸುತ್ತಿದ್ದು, ಈ ವಿಶೇಷ ಉಪನ್ಯಾಸ ಕಾರ್ಯಕ್ರಮ ಅದಕ್ಕೆ ಪೂರಕವಾಗಿ ನೆರೆವೇರಿತು.  

ಕಾರ್ಯಕ್ರಮ ನಿರೂಪಕಿ ಆಗಿ ಕುಮಾರಿ ಪ್ರಾಂಜಲಿ ನೆರೆವೇರಿಸಿ, ಕಾರ್ಯಕ್ರಮದ  ಪ್ರಾಸ್ತಾವಿತ  ನುಡಿಗಳನ್ನು ಡಾ.ನಂದಿನಿ ದೇವರಮನಿ, ಸಹಾಯಕ ಪ್ರಾಧ್ಯಾಪಕರು ಅಪರಾಧಶಾಸ್ತ್ರ ಮತ್ತು ಅಪರಾಧ  ನ್ಯಾಯ ರಾ ಚೆ ವಿ   ಬೆಳಗಾವಿ ಇವರು ನೆರೆವೇರಿಸಿ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ನೆರೆವೇರಿಸಿದರು.  ಕಾರ್ಯಕ್ರಮ ವಿಶೇಷ ಅತಿಥಿ ಗಳಾಗಿ ಪ್ರೊ. ಸಾಬಣ್ಣ ತಳವಾರ್ ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ, ರಾ. ಚ. ವಿ, ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಅಪರಾಧಶಾಸ್ತ್ರ ಮತ್ತು ಅರ್ಥಶಾಸ್ತ್ರದ ನಡುವಿನ  ಸಂಬಂಧವನ್ನು ಮತ್ತು ಅಪರಾಧಕ್ಕೆ ಅರ್ಥಶಾಸ್ತ್ರ ಯಾವರೀತಿ ಕಾರಣವಾಗುವುದೆಂದು ಸವಿಸ್ತಾರವಾಗಿ ವಿವರಿಸಿದರು.  

ಕಾರ್ಯಕ್ರಮ ವಿಶೇಷ ಉಪನ್ಯಾಸಕರಾಗಿ ಪ್ರೊ.ಡಿ. ಮಾಧವ ಸೋಮಸುಂದರಂ ಮುಖ್ಯಸ್ಥರು ಭಾರತೀಯ ಅಪರಾಧಶಾಸ್ತ್ರ ಸಂಘ ಹಾಗು ಅಪರಾಧಶಾಸ್ತ್ರ ಮತ್ತು ಅಪರಾಧಿತ  ನ್ಯಾಯ ವಿಭಾಗ, ಎಂ. ಏಸ್. ವಿಶ್ವವಿದ್ಯಾಲಯ ತಮಿಳುನಾಡು ಇವರು ಆಗಮಿಸಿ ಅಪರಾಧ ನ್ಯಾಯಾಂಗ  ವ್ಯವಸ್ಥೆ  ಮತ್ತು ದಂಡನೆಯ ಬಗ್ಗೆ ಸವಿಸ್ತಾರವಾಗಿ ಅವುಗಳ ನಡುವಿನ ಹೊಂದಾಣಿಕೆ ಮತ್ತು ಅವುಗಳ ಕಾರ್ಯ ವೈಖರಿಯ ಬಗ್ಗೆ ಮತ್ತು ಈ ಮೂರು ವ್ಯವಸ್ಥೆಗಳು ಸಮಾಜಕ್ಕೆ ಯಾವ ರೀತಿಯಾಗಿ ಒಳಿತುಮಾಡುತ್ತವೆ ಹಾಗೂ  ಅವುಗಳ ಉಗಮ ಪ್ರಾಚೀನ ಕಾಲದಿಂದ ಹಿಡಿದು ಈಗಿನ ಮತ್ತು ಭವಿಷ್ಯದಲ್ಲಿನ ಅವುಗಳ ಕಾರ್ಯ ವೈಖರಿಯ ಬಗೆಗೆ ವಿಶೇಷವಾಗಿ ಮತ್ತು ವಿದ್ಯಾಥರ್ಿಗಳಿಗೆ ಮನಮುಟ್ಟುವಂತೆ ಉಪನ್ಯಾಸವನ್ನು ಮಂಡಿಸಿದರು, ಹಾಗೂ  ಕಾರ್ಯಕ್ರಮ ಅಧ್ಯಕ್ಷೀಯ ಮಾತುಗಳನ್ನು ಪ್ರೊ.ಆರ್.ಏನ್. ಮನಗೊಳಿ ಮುಖ್ಯಸ್ತ್ರರು ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗ, ರಾ.ಚ.ವಿ. ಬೆಳಗಾವಿ ಇವರು ನೆರವೇರಿಸಿದರು. 

ಕಾರ್ಯಕ್ರಮದ ಧನ್ಯವಾದ ನುಡಿಗಳನ್ನು ಶ್ರೀ ಚಂದ್ರಶೇಖರ್ ಎಸ್. ವಿ. ಸಹಾಯಕ ಪ್ರಾಧ್ಯಾಪಕರು   ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗ ಇವರು ನೆರವೇರಿಸಿ ಕೊಟ್ಟರು.