ಗದಗ: ರಾಜ್ಯ ಸರಕಾರವು ಪರಿಶಿಷ್ಟ ಜಾತಿ ಜನಾಂಗದವರಿಗೆ, ಹಿಂದುಳಿದ ಹಾಗೂ ಬಡವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ನುಡಿದರು.
ನರಗುಂದ ಮತಕ್ಷೇತ್ರದ ಲಕ್ಕುಂಡಿ ಗ್ರಾಮದಲ್ಲಿಂದು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ದಾನಚಿಂತಾಮಣಿ ಅತ್ತಿಮಬ್ಬೆ ಸ್ಮಾರಕ ಸಮುದಾಯ ಭವನ, ಐದು ಲಕ್ಷ ರೂ. ವೆಚ್ಚದಲ್ಲಿ ರೇಣುಕಾಚಾರ್ಯ ಸಮುದಾಯ ಭವನ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಭೂಮಿ ಪೂಜೆ ನೆರವೇರಿಸಿ ಹಾಲ್ಗುಂಡಿ ಬಸವೇಶ್ವರ ಕರೆಗೆ ಬಾಗಿನ ಅಪರ್ಿಸಿ ತದ ನಂತರ ಅನ್ನದಾನೇಶ್ವರ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. ಲಕ್ಕುಂಡಿ ಗ್ರಾಮದಲ್ಲಿ ಎಳು ಎಕರೆ ಪ್ರದೇಶದಲ್ಲಿ 21ಕೋಟಿ ರೂ. ವೆಚ್ಚದಲ್ಲಿ ನಿಮರ್ಾಣವಾಗುವ ಕಿತ್ತೂರ ಚನ್ನಮ್ಮಾ ವಸತಿ ಶಾಲೆ ಕಟ್ಟಡ ಒಂದು ಮಾದರಿಯಾಗುವ ರೀತಿಯಲ್ಲಿ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಯೊಂದಿಗೆ ಪೂರ್ಣಗೊಳಿಸಬೇಕು ನೂತನ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯ ಹಿಂದೆಂದೂ ಕಂಡು ಕೇಳರಿಯದ ಪ್ರವಾಹದ ಸಂಕಷ್ಟ ಎದುರಿಸುತ್ತಿದ್ದು ಇದನ್ನು ಯಶಸ್ವಿಯಾಗಿ ಎದುರಿಸಿ ಸಂತ್ರಸ್ಥರ ಬದುಕು ಮತ್ತೆ ರೂಪಿಸಲು ರಾಜ್ಯ ಸರಕಾರ ಸಂಕಲ್ಪಿಸಿ ಅಗತ್ಯದ ಎಲ್ಲ ಕ್ರಮ ಕೈಗೊಂಡಿದೆ. ಗದಗ ಜಿಲ್ಲೆಯ ನರಗುಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ನೆರೆ ಪರಿಸ್ಥಿತಿ ಮತ್ತೆ ಮೂರನೇ ಬಾರಿ ಉಂಟಾಗಿದೆ ಸಂತ್ರಸ್ಥರ ಸಂರಕ್ಷಣೆ ಸಂಕಷ್ಟ ಪರಿಹಾರ ಕುರಿತಂತೆ ಸಂತ್ರಸ್ಥರಿಗೆ ಧೈರ್ಯ ತುಂಬಿದ್ದು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತ ನಿರಂತರ ಪರಿಸ್ಥಿತಿಯ ಕುರಿತು ನಿಗಾವಹಿಸಿದೆ. ಮುಂಬರುವ ದಿನಗಳಲ್ಲಿ ಲಕ್ಕುಂಡಿ ಗ್ರಾಮದ ಅಭಿವೃದ್ಧಿಗೆ ಅಗತ್ಯದ ಎಲ್ಲ ಕ್ರಮ ತಾವು ಕೈಗೊಳ್ಳುವದಾಗಿ ಸಚಿವರು ಭರವಸೆ ನೀಡಿದರು. ಸಿಂಗಟಾಲೂರ ಏತ ನೀರಾವರಿ ಯೋಜನೆಯಡಿ ಲಕ್ಕುಂಡಿಯ ದಂಡಿ ದುರ್ಗಮ್ಮನ ಕೆರೆ ಹಾಗೂ ಹಾಲಗೊಂಡ ಬಸವೇಶ್ವರ ಕೆರೆಗೆ ಹಾಗೂ ಜಂತ್ಲಿ ಶಿರೂರ, ಪೇಠಾಲೂರ ಕೆರೆಗಳಿಗೆ 14.86 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಲು ಬಾಕಿ ಇದ್ದ ಸಂಬಂಧಿತ ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸಿ ಅನುದಾನ ಬಿಡುಗಡೆ ಮಾಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪೂರ್ಣಗೊಳಿಸಲಾಗುತ್ತಿದೆ ಎಂದು ಸಚಿವ ಸಿ.ಸಿ. ಪಾಟೀಲ ನುಡಿದರು.
ಜಿ.ಪಂ. ಅಧ್ಯಕ್ಷ ಕುಮಾರ ಸಿದ್ದಲಿಂಗೇಶ್ವರ.ಎಚ್.ಪಾಟೀಲ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಲಕ್ಕುಂಡಿ ಗ್ರಾ.ಪಂ ಅಧ್ಯಕ್ಷ ಶಿವಪುತ್ರಪ್ಪ ಬೂದಿಹಾಳ, ಉಪಾಧ್ಯಕ್ಷೆ ಪ್ರೇಮಾ ಮಟ್ಟಿ, ಲಕ್ಕುಂಡಿ ಗ್ರಾ.ಪಂ. ಸದಸ್ಯರುಗಳು, ವಸಂತ ಮೇಟಿ, ರಾಜು ಕುರಡಗಿ ಸೇರಿದಂತೆ ಲಕ್ಕುಂಡಿ ಗ್ರಾಮದ ಗುರು ಹಿರಿಯರು, ಗ್ರಾಮಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು.