ಲೋಕದರ್ಶನ ವರದಿ
ಬೆಳಗಾವಿ, 3: ವಿದ್ಯಾಥರ್ಿಗಳು ಕಲಾತ್ಮಕವಾಗಿ ರಂಗೋಲಿ ಮೂಲಕ ವಿಜ್ಞಾನ ಮಾದರಿ ಚಿತ್ರಗಳನ್ನು ಬಿಡಿಸುವ ಸ್ಪಧರ್ೆ ಜ.3 ರಂದು ಕೆ.ಎಲ್.ಇ. ಜಿ.ಎ. ಪ್ರೌಢಶಾಲೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ ಆಜೀವ ಸದಸ್ಯ ಮಹಾದೇವ ಬಳಿಗಾರ ವಿದ್ಯಾಥರ್ಿಗಳ ನಾವೀಣ್ಯ ವಿಜ್ಞಾನ ರಂಗೋಲಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧರಾಮ ಗದಗ ಮಾತನಾಡಿ ಈ ಸ್ಪಧರ್ೆ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳ ವಿಜ್ಞಾನ ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗಲಿದ್ದು, ವಿದ್ಯಾಥರ್ಿಗಳ ಈ ರಂಗೋಲಿ ಕೈಚಳಕ ಮೌಲ್ಯಮಾಪಕರ ಮನಸ್ಸನ್ನು ಗೆಲ್ಲುವ ಮೂಲಕ ಹೆಚ್ಚಿನ ಅಂಕಗಳಿಸಲು ಸಹಕಾರಿಯಾಗಲಿದೆ
ಎಂದರು.
ಭೌತಶಾಸ್ತ್ರ ವಿಭಾಗದಲ್ಲಿ ರಕ್ಷಿತಾ ಹಿರೇಮಠ-ಪ್ರಥಮ, ಪುಷ್ಪಾ ವಂಟಮೂರಿ- ದ್ವಿತೀಯ, ಮಿಸ್ಬಾ ಮುಲ್ಲಾ ತೃತೀಯ ಸ್ಥಾನ ಪಡೆದರು. ರಾಸಾಯನ ಶಾಸ್ತ್ರ ವಿಭಾಗದಲ್ಲಿ ಕೀತರ್ಿ ಮಡಿವಾಳರ -ಪ್ರಥಮ, ಶ್ವೇತಾ ಕುಡೊಳ್ಳಿ- ದ್ವಿತೀಯ, ಅನುಪಮಾ ತಿಪ್ಪಾ ತೃತೀಯ ಸ್ಥಾನ ಪಡೆದರು. ಜೀವಶಾಸ್ತ್ರ ವಿಭಾಗದ ರಂಗೋಲಿ ಸ್ಪಧರ್ೆಯಲ್ಗಿ ಕೀತರ್ಿ ಪಟ್ಟೇದ, ಸ್ನೇಹಾ ಕುಂಬಾರ, ಪುಷ್ಪಾ ಮುರಗೋಡ ಅನುಕ್ರಮ ಬಹುಮಾನ ಪಡೆದುಕೊಂಡರು.
ತೀಪರ್ುಗಾರರಾಗಿ ಉಪನ್ಯಾಸಕಾರದ ಸಾವಿತ್ರಿ ಬೆಂತೂರ ಹಾಗೂ ಜಗದೀಶ ಗೋಲಿಹಳ್ಳಿ ಆಗಮಿಸಿ ವಿದ್ಯಾಥರ್ಿಗಳ ಚಿತ್ತಾರದ ವಿಜ್ಞಾನದ ರಂಗೋಲಿಗಳ ಬಗ್ಗೆ ಪ್ರಶಂಸಿದರು. ವಿಜ್ಞಾನ ವಿಭಾಗದ ಜಿ. ರಾಮಚಂದ್ರ, ಸಿ.ಪಿ ದೇವಋಷಿ, ಮಹಾಂತೇಶ ಮಗದುಮ್ಮ, ಅಲ್ಲಭಕ್ಷ ಶಿಲಾರ, ವಿಶಾಲಾಕ್ಷಿ ಅಂಗಡಿ, ಸಾಗರ ಕೋಲಕಾರರು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮ ಸಂಘಟಿಸಿದ್ದರು.