ರಾಣೇಬೆನ್ನೂರು ವಕೀಲರ ಸಂಘದ ಚುನಾವಣೆ : ಬಿ ಎಚ್. ಬುರಡಿಕಟ್ಟಿ.ಗೆ ಪುನ: ಓಲಿದ ಅಧ್ಯಕ್ಷ ಸ್ಥಾನ
ರಾಣೇಬೆನ್ನೂರು 20: ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ಜಿಲ್ಲೆಯ ವಾಣಿಜ್ಯ ನಗರದ ರಾಣೇಬೆನ್ನೂರಿನ ವಕೀಲರ ಸಂಘಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು. ಎರಡು ವರ್ಷಗಳ ಅವಧಿಯ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂವರು, ಉಪಾಧ್ಯಕ್ಷ ಸ್ಥಾನಕ್ಕೆ ಇರ್ವರು ಸ್ಪರ್ಧೆಯಲ್ಲಿದ್ದರು. ಮುಂಜಾನೆ ಎಂಟು ಗಂಟೆಯಿಂದ ಆರಂಭವಾದ ಚುನಾವಣಾ ಪ್ರಕ್ರಿಯೆ, ಸಂಜೆ 4-30 ಕ್ಕೆ ಮುಕ್ತಾಯ ಕಂಡಿತು. ಮತಗಳ ಎಣಿಕೆ ಕಾರ್ಯವು ರಾತ್ರಿ 9 ರವರೆಗೆ ನಡೆಯಿತು.
ಕಳೆದ ಎರಡು ಅವಧಿಯ 4 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಬಿ. ಎಚ್. ಬುರಡಿಕಟ್ಟಿ ಅವರು,3ನೇ ಅವಧಿಗೆ ಪುನಃ ಆಯ್ಕೆ ಬಯಸಿ ಸ್ಪರ್ಧಿಸಿದ್ದರು. 13 ಸದಸ್ಯ ಬಲದ ಸಂಘಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಬಹುಮತಗಳ ಅಂತರದಲ್ಲಿ ಗೆಲುವು ಸಾಧಿಸಿ, ಪುನ:3 ಅವಧಿಗೆ ಬಿ.ಎಚ್. ಬುರಡಿಕಟ್ಟಿ ಅವರು ಜಯದ ಮಾಲೆ ಧರಿಸಿದಂತಾಗಿದೆ. ಉಪಾಧ್ಯಕ್ಷರಾಗಿ ಹೆಚ್. ಹೆಚ್.ತಿಮ್ಮೇನಹಳ್ಳಿ, ಗೆಲುವು ಸಾಧಿಸಿದ್ದರೆ. ಕಾರ್ಯದರ್ಶಿ ಎಸ್. ಎಸ್. ದ್ಯಾವಕ್ಕಳ್ಳವರ, ಮತ್ತು ಮಹಿಳಾ ಪ್ರತಿನಿಧಿ ಮಂಜುಳಾ ಎಸ್. ರಡ್ಡೇರ( ಅವಿರೋಧ ಆಯ್ಕೆ ) ಎಂ.ಎಸ್. ಭಿಕ್ಷಾವರ್ತಿಮಠ ಸಹ ಕಾರ್ಯದರ್ಶಿ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸುಭಾಷ್ ಕೆಂಗಲ್, ಎಂ. ಸಿ. ಬೀದರಕಟ್ಟಿ, ಪಿ.ಪಿ. ಪಾರ್ವತಿ, ಎಸ್.ಕೆ. ಐರಣಿ, ಆರ್. ಜಿ. ಗಡ್ಡದ, ಡಿ.ಎಲ್. ಬಡಪ್ಪಳವರ, ಮಂಜುನಾಥ ಇಂಗಳಗೊಂದಿ, ಮತ್ತು ಡಿ. ಎಂ.ಮುದಿಗೌಡ್ರ ಅವರು ಚುನಾಯಿತರಾಗಿದ್ದಾರೆ. ಚುನಾವಣಾ ಫಲಿತಾಂಶವೂ ಹೊರ ಬೀಳುತ್ತಿದ್ದಂತೆ, ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳ ಪರ ಹೊರಗಡೆ ಜಮಾಯಿಸಿದ್ದ ನೂರಾರು ನ್ಯಾಯವಾದಿಗಳು, ಪರಸ್ಪರ ಆಲಂಗಿಸಿ, ಅಭಿನಂದಿಸಿ ಶುಭ ಹಾರೈಸಿದರು.