ರಣಜಿ: ಶ್ರೇಯಸ್, ಗೌತಮ್ ಅರ್ಧಶತಕ, ಉತ್ತಮ ಮೊತ್ತ ಕಲೆ ಹಾಕಿದ ಕರ್ನಾಟಕ

ಶಿವಮೊಗ್ಗ, ಫೆ.5 :   ಆಲ್ ರೌಂಡರ್ ಶ್ರೇಯಸ್ ಗೋಪಾಲ್ (50) ಹಾಗೂ ಕೆ.ಗೌತಮ್ (82) ಅವರ ಭರ್ಜರಿ ಅರ್ಧಶತಕದ ಬಲದಿಂದ ಕರ್ನಾಟಕ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಮಧ್ಯ ಪ್ರದೇಶ ವಿರುದ್ಧ ಉತ್ತಮ ಮೊತ್ತ ಕಲೆ ಹಾಕಿದೆ. 

ಕರ್ನಾಟಕ ಮೂರು ವಿಕೆಟ್ ಗೆ 233 ರನ್ ಗಳಿಂದ ಆಟ ಮುಂದುವರಿಸಿ 426 ರನ್ ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಮಧ್ಯ ಪ್ರದೇಶ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಗೆ 60 ರನ್ ಕಲೆ ಹಾಕಿದೆ.   

ಬುಧವಾರ ಬ್ಯಾಟಿಂಗ್ ಆರಂಭೀಸಿದ ಕರ್ನಾಟಕ ಮಧ್ಯಮ ಕ್ರಮಾಂಕದಲ್ಲಿ ಬೇಗನೆ ವಿಕೆಟ್ ಗಳನ್ನು ಕಳೆದುಕೊಂಡಿತು. ಕೆ.ವಿ ಸಿದ್ಧಾರ್ಥ್ 62, ಎಸ್. ಶರತ್ 15 ರನ್ ಬಾರಿಸಿ ಔಟ್ ಆದರು. ಏಳನೇ ವಿಕೆಟ್ ಗೆ ಶ್ರೇಯಸ್ ಹಾಗೂ ಗೌತಮ್ ಜೋಡಿ ಭರ್ಜರಿ ಜೊತೆಯಾಟದ ಕಾಣೀಕೆ ನೀಡಿತು. ಈ ಜೋಡಿ ಮಧ್ಯ ಪ್ರದೇಶದ ಬೌಲರ್ ಗಳನ್ನು ಕಾಡಿತು.   

ಈ ಜೋಡಿ ಏಳನೇ ವಿಕೆಟ್ ಗೆ 126 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಶ್ರೇಯಸ್ ಗೋಪಾಲ್ 50 ರನ್ ಬಾರಿಸಿ ಔಟ್ ಆದರು. ಈ ಜೋಡಿ ತಂಡ 400 ರನ್ ಗಳ ಗಡಿ ದಾಟುವಲ್ಲಿ ಶ್ರಮಿಸಿತು. ಕೆ.ಗೌತಮ್ ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಗೌತಮ್ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 82 ರನ್ ಕಲೆ ಹಾಕಿದರು. ಅಂತಿಮವಾಗಿ ಕರ್ನಾಟಕ 426 ರನ್ ಗಳಿಗೆ ಆಲೌಟ್ ಆಯಿತು.

ಮಧ್ಯ ಪ್ರದೇಶ ತಂಡದ ಪರ  ರವಿ ಯಾದವ್ ಹಾಗೂ ಕುಮಾರ್ ಕಾರ್ತಿಕೇಯ್ ತಲಾ ಮೂರು ವಿಕೆಟ್ ಪಡೆದರು.   

ಮೊದಲ ಇನ್ನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ ತಂಡದ ಆರಂಭ ಕಳಪೆಯಾಗಿತ್ತು. ರಜತ್ ಪತಿದಾರ್ ಸೊನ್ನೆ ಸುತ್ತಿದರು. ಎರಡನೇ ವಿಕೆಟ್ ಗೆ ರಮೀಜ್ ಖಾನ್ ಹಾಗೂ ಯಶ್ ದುಬೆ 49 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಯಶ್ ದುಬೆ (ಅಜೇಯ 17) ಹಾಗೂ ಶುಭಂ ಶರ್ಮಾ (ಅಜೇಯ 6) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.   

ಕರ್ನಾಟಕದ ಪರ ಅಭಿಮನ್ಯು ಮಿಥುನ್ ಹಾಗೂ ಪ್ರತೀಕ್ ಜೈನ್ ತಲಾ ಒಂದು ವಿಕೆಟ್ ಪಡೆದರು.