ಬೆಳಗಾವಿ,ಸೆ 22 ಉಪಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ. ಸುಪ್ರೀಂ ಕೋರ್ಟ್ನಲ್ಲಿ ತೀಪು ನಮ್ಮ ಪರವೇ ಬರಲಿದೆ.ರಾಜೀನಾಮೆ ಕೊಟ್ಟ ದಿನದಿಂದಲೇ ನಾನು ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ದವಾಗಿದ್ದೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಲಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಚುನಾವಣಾಧಿಕಾರಿ ಸ್ಪೀಕರ್ ಆದೇಶವನ್ನು ಓದಿಕೊಂಡು ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಹೇಳಿದ್ದಾರೆ.ಆದರೆ ಅವರು ಹೇಳಿದ ಹಾಗೆ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಈಗಾಗಲೇ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ನ್ಲ್ಲಿದೆ.ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶ ಉಲ್ಲಂಘಿಸಿ ಸ್ಪೀಕರ್ ರಮೇಶ್ಕುಮಾರ್ ತೀಪು ನೀಡಿದ್ದಾರೆ. ನಮಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ ಸುಪ್ರೀಂಕೋರ್ಟ್ನ್ಲ್ಲಿ ನಮ್ಮ ಪರ ತೀಪು ಬರಲಿದೆ.ಮತ್ತು ನಾನೇ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನಾನು ಸೇರಿದಂತೆ ಅನರ್ಹ ಶಾಸಕರೆಲ್ಲ ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.ಎಲ್ಲರೂ ಒಟ್ಟಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಗೋಕಾಕ್ ರಾಜಕಾರಣದಲ್ಲಿ ಊಹಾಪೋಹಗಳು ಶುರುವಾಗಿವೆ. ನನ್ನ ಅಳಿಯ ಅಂಬಿರಾವ್ ಪಾಟೀಲ್ ಬಗ್ಗೆ ಹತಾಶರಾಗಿ ಸತೀಶ್ ಜಾರಕಿಹೊಳಿ ಅವರು ಮಾತಾನಾಡುತ್ತಿದ್ದಾರೆ. ಅಂಬಿರಾವ್ ಪಾಟೀಲ್ ನಮ್ಮ ಕ್ಷೇತ್ರದ ಜನರ ವಿಶ್ವಾಸ ಗಳಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಜನ ಏನಾದರು ಆತನ ಬಗ್ಗೆ ಒಂದೇ ದೂರು ಹೇಳಿದರೆ ಆತನನ್ನ ತೆಗೆಯುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಲಖನ್ ಜಾರಕಿಹೊಳಿ ಶಾಸಕನಾದರೆ ಮೊದಲು ಸಂತೋಷಪಡುವ ವ್ಯಕ್ತಿ ನಾನೇ. ಆದರೆ ಸತೀಶ್ ಜಾರಕಿಹೊಳಿ ಮಾತು ಕೇಳಿಕೊಂಡು ಲಖನ್ ಹಾಳಾಗುತ್ತಿದ್ದಾನೆ ಎಂದು ಅವರು ಆರೋಪಿಸಿದರು.
ರಮೇಶ್ ಜಾರಕಿಹೊಳಿ ಏನೋ ಒಂದು ವಸ್ತು ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ನಡೆಸುವ ಸಮಾವೇಶದ ವೇದಿಕೆ ಮೇಲೇರಿ ನಾನೇ ಹೋಗಿ ಪ್ರಶ್ನಿಸುತ್ತೇನೆ.ಸತೀಶ್ ಜಾರಕಿಹೊಳಿ ಮತ್ತು ಆತನ ಹಗರಣಗಳ ಬಗ್ಗೆ ಜನರ ಮುಂದೆ ಬಿಚ್ಚಿಟ್ಟರೆ ಜಾರಕಿಹೊಳಿ ಮನೆತನದ ಮಾನ ಮರ್ಯಾದೆ ಹಾಳಾಗುತ್ತದೆ ಎಂದು ಸುಮ್ಮನಿದ್ದೇನೆ. ಇದು ನಮ್ಮ ತಂದೆ ಲಕ್ಷ್ಮಣರಾವ್ ಜಾರಕಿಹೊಳಿ ಕಷ್ಟಪಟ್ಟು ಕಟ್ಟಿದ ಸಾಮ್ರಾಜ್ಯ, ಸತೀಶ್ ಜಾರಕಿಹೊಳಿ ಕಟ್ಟಿದ್ದಲ್ಲಎಂದು ತಿರುಗೇಟು ನೀಡಿದ್ದಾರೆ.
ಸಹೋದರನ ಬಗ್ಗೆ ಅಸಮಾಧಾನ ಹೊರಹಾಕಿದ ಅವರು, ಸತೀಶ್ ಜಾರಕಿಹೊಳಿಗೆ ಮಾಡುವುದಕ್ಕೆ ಏನೂ ಕೆಲಸ ಇಲ್ಲಾ. ಯಮಕನಮರಡಿ ಕ್ಷೇತ್ರದಲ್ಲಿ ಅವನ ಆಪ್ತಸಹಾಯಕರುಗಳ ಹಾವಳಿ ಇದೆ. ಸತೀಶ್ ಜಾರಕಿಹೊಳಿ ಜನರಿಗೆ ಟೀಪಿ ಹಾಕುತ್ತಾನೆ. ನಾನು ಸತೀಶ್ನಂತೆ ಪೋಟೋಗೆ ಪೋಸ್ ಕೊಡುವುದಿಲ್ಲ. ನಾನು ನಾಮಪತ್ರ ಸಲ್ಲಿಸಿ ಮನೆಯಲ್ಲಿ ಕುಳಿತರು ಜನರು ನನ್ನನ್ನು ಗೆಲ್ಲಿಸುತ್ತಾರೆ.ತಮ್ಮ ಮೇಲೆ ಜನರ ಪ್ರೀತಿಯಿದೆ. ಎಲ್ಲಿಯವರೆಗೆ ಜನರ ಪ್ರೀತಿಯಿದೆ ಅಲ್ಲಿಯವರೆಗೆ ನಾನು ಗೆಲ್ಲುತ್ತೇನೆ. ಜನರ ಪ್ರೀತಿ ಕಳೆದುಕೊಂಡರೆ ನಾನು ಕೂಡಾ ಜೀರೋ ಎಂದು ಅವರು ಹೇಳಿದರು.