ಚಿತ್ರೀಕರಣ ಮುಗಿಸಿದ '100' ಖಾಕಿ ಖದರ್ನಲ್ಲಿ ರಮೇಶ್ ಅರವಿಂದ್

ಬೆಂಗಳೂರು, ನ 14 :    ಸ್ಯಾಂಡಲ್ವುಡ್ನ ಎವರ್ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ನಿರ್ದೇಶನದ ಸೈಬರ್ ಕ್ರೈಮ್ ಆಧಾರಿತ ಕೌಟುಂಬಿಕ ಥ್ರಿಲ್ಲರ್ ಚಿತ್ರ '100'  ಚಿತ್ರೀಕರಣ ಪೂರ್ಣಗೊಂಡಿದ್ದು,  ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ 

ರಮೇಶ್ ಅರವಿಂದ್, ಪೂರ್ಣ, ರಚಿತ ರಾಮ್ ಮತ್ತಿತರರ 'ವಿಶ್ ಯು ಎ ಹ್ಯಾಪಿ ಬರ್ತ್ ಡೇ' ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳಿಸಿದೆ ಇನ್ನೊಂದು ತಿಂಗಳಲ್ಲಿ ರಿ ರೆಕಾರ್ಡಿಂಗ್ ಕೆಲಸವೂ ಮುಗಿಯಲಿದೆ ಎಂದು ಚಿತ್ರತಂಡ ತಿಳಿಸಿದೆ 

ಚಿತ್ರದ ಬಗ್ಗೆ ವಿರಿಸಿದ ರಮೇಶ್ ಅರವಿಂದ್, '100' 'ಸೈಬರ್ ಕ್ರೈಮ್' ಆಧಾರಿತ ಕಥೆಯಾಗಿದೆ  ಬೆಂಕಿ, ಚಾಕು, ಅಧಿಕಾರ, ಸಾಮಾಜಿಕ ಜಾಲತಾಣವನ್ನು ಯಾರು ಉಪಯೋಗಿಸುತ್ತಾರೆ ಎಂಬುದರ ಮೇಲೆ ಅದರ ಬಳಕೆ, ದುರ್ಬಳಕೆ ಗಳಿರುತ್ತವೆ.   ಅಂತೆಯೆ '100' ಸಿನಿಮಾದಲ್ಲಿ ಸಾಮಾಜಿಕ ಜಾಲತಾಣದ ದುರ್ಬಳಕೆಯ ಮೇಲೆ. ಅದರಿಂದಾಗುವ ಅನಾಹುತ ಬೆಳಕು ಚೆಲ್ಲಲಾಗಿದೆ ಎಂದು ಮಾಹಿತಿ ನೀಡಿದ್ದಾರೆ 

ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳುವ ವಿಲನ್ ಪಾತ್ರದಲ್ಲಿ ವಿಶ್ವ ಹೆಸರಿನ ಹೊಸ ನಟನ ಪರಿಚಯವಾಗುತ್ತಿದ್ದು, ಅವನನ್ನು ಸಂಹಾರ ಮಾಡುವ ವಿಷ್ಣು ಹೆಸರಿನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. 

ರಮೇಶ್ ಅರವಿಂದ ಪತ್ನಿಯ ಪಾತ್ರದಲ್ಲಿ ಪೂರ್ಣ, ಮಗಳ ಪಾತ್ರದಲ್ಲಿ ಪುಟಾಣಿ ಸ್ಮಯ ನಟಿಸಿದ್ದಾರೆ.  ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ.  

ಈ ಹಿಂದೆ ತೇಜಸ್ವಿನಿ ಪ್ರೊಡಕ್ಷನ್ಸ್ ನಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿರುವ ಎಂ ರಮೇಶ್ ಶೆಟ್ಟಿ, ಸೂರಜ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರ '100' 

ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಪ್ರಮೋದ್ ಮರವಂತೆ, ಭಾಸ್ಕರ್ ಸೇರಿದಂತೆ ಮೂವರು ಸಾಹಿತ್ಯ ಒದಗಿಸಿದ್ದಾರೆ.  ಸತ್ಯ ಹೆಗಡೆ ಛಾಯಾಗ್ರಹಣವಿದೆ.