ಲೋಕದರ್ಶನ ವರದಿ
ಸಿದ್ದಾಪುರ 12 : ಲೇಖಕ ಜಿ. ಜಿ. ಹೆಗಡೆ ಬಾಳಗೋಡ ಅವರ 'ಸಮಯದ ನಿರ್ವಹಣೆ' ಎಂಬ ಪುಸ್ತಕ ಬಿಡುಗಡೆ ಹಾಗೂ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಯಾಜಿ ಬಳ್ಕೂರು ಅವರ ಸನ್ಮಾನ ಮತ್ತು ಯಾಜಿ ಯಕ್ಷ ಮಂಡಳಿ ವಾಲಗಳ್ಳಿ ಹಾಗೂ ಅತಿಥಿ ಕಲಾವಿದರನ್ನೊಳಗೊಂಡು ರಾಜಾ ಉಗ್ರಸೇನ, ಕಂಸವಧೆ ಎಂಬ ಯಕ್ಷಗಾನ ಪ್ರದರ್ಶನವು ದಿನಾಂಕ 13, ಶನಿವಾರ ಸಂಜೆ 6.30 ರಿಂದ ಸಿದ್ದಾಪುರದ ಶ್ರೀ ಶೃಂಗೇರಿ ಶಂಕರಮಠ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಸ್ಥಳೀಯ ಯಕ್ಷಾಭಿಮಾನಿ ಬಳಗ, ಟಿ.ಎಂ.ಎಸ್. ಲಯನ್ಸ್ ಕ್ಲಬ್, ಶ್ರೀ ಶೃಂಗೇರಿ ಶಂಕರಮಠ, ಲಯನ್ ಎಂ.ಎಸ್. ಜೋಶಿ ಶಿರಸಿ ಅವರುಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ವಹಿಸುವರು. ಪುಸ್ತಕ ಬಿಡುಗಡೆಯನ್ನು ಲಯನ್ಸ್ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆರವರು ನೆರವೇರಿಸುವರು. ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ|| ಎಂ.ಪಿ. ಶೆಟ್ಟಿ, ಶೃಂಗೇರಿ ಶಂಕರ ಮಠದ ಧಮರ್ಾಧಿಕಾರಿ ದೊಡ್ಮನೆ ವಿಜಯ ಹೆಗಡೆ, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲನಾ ಅಭಿಯಂತರ ಎಂ.ಎಸ್. ಜೋಶಿ ಶಿರಸಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡ್ಮನೆ, ಲಯನ್ಸ್ ಜಿಲ್ಲಾ ಚೇರ್ಮನ್ ಸತೀಶ ಗೌಡರ್ ಹೆಗ್ಗೋಡ್ಮನೆ ಗೌರವ ಉಪಸ್ಥಿತರಿರುವರು.
ಸಿದ್ದಾಪುರ-ಪಟ್ಟಣದ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ನವರಾತ್ರಿ ಉತ್ಸವವು ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದೆ. ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳಿ ವತಿಯಿಂದ ಭಜನೆ, ಲಲಿತ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಅಕ್ಟೋಬರ್ 19
ಶುಕ್ರವಾರ ಶ್ರೀ ರಾಯೇಶ್ವರ ಕಾಮಾಕ್ಷಿ ದೇವಿಯ ಕುಳಾವೆಯವರ ವಿಶೇಷ ಕಾರ್ಯಕ್ರಮ, ಸುಹಾಸಿನಿಯರ ಪೂಜೆ, ಕನ್ನಿಕೆಯರ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಾಯಂಕಾಲ
6-30 ರಿಂದ ವಿನೋದ ಎಸ್.ಭಟ್ಟ ರವರಿಂದ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ,
7-30 ಕ್ಕೆ ರೇವಣಕರ್ ಕುಳಾವೆ ಯವರಿಂದ ಪಾನಕ ಪೂಜಾ ಸೇವೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಪಾಲ್ಗೊಳ್ಳಬೇಕಾಗಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿಜಯಾ ರಾಮದಾಸ್ ರಾಯ್ಕರ ವಿನಂತಿಸಿದ್ದಾರೆ.