ಬೆಂಗಳೂರು, ಜೂನ್ 2,ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೆ 19 ರಂದು ಚುನಾವಣೆ ನಡೆಯಲಿದ್ದು, ಅಧಿಸೂಚನೆ ಪ್ರಕಟವಾಗುವುದರೊಂದಿಗೆ ಇಂದಿನಿಂದಲೇ ನಾಪಪತ್ರ ಸಲಿಕೆಯ ಕಾರ್ಯವೂ ಆರಂಭವಾಗಿದೆ. ಕರೋನ ನಡುವೆಯೂ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಜ್ವರ ಕಾಣಿಸಿಕೊಂಡಿದೆ. . ಹೆಚ್ಚು ಕಡಿಮೆ ಮಾಜಿ ಪ್ರಧಾನಿ .ಎಚ್.ಡಿ ದೇವೇಗೌಡ ಕಣಕ್ಕೆ ಇಳಿಯುವುದು ಮತ್ತು ಅವರನ್ನು ರಾಜ್ಯಸಭೆಗೆ ಕಳಿಸಲು ಕಾಂಗ್ರೆಸ್ ಅದ್ಯಕ್ಷ ಡಿ.ಕೆ. ಶಿವಕುಮಾರ್ ಸಹ ವೈಯಕ್ತಿಕ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಮೇಲಾಗಿ ಪಕ್ಷದಲ್ಲಿ ಬಿರುಸಿನ ಪೈಪೋಟಿ ಕಾಣಿಸಿಕೊಂಡಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಪ್ರಭಾಕರ ಕೋರೆ, ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್, ರಾಜೀವ್ಗೌಡ ಮತ್ತು ಜೆಡಿಎಸ್ನ ಕುಪೇಂದ್ರ ರೆಡ್ಡಿ ಅವರ ಸದಸ್ಯತ್ವದ ಅವಧಿ ಇದೇ ತಿಂಗಳು ಕೊನೆಯಾಗಲಿದೆ.
ಈ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ 2 ಮತ್ತು ಕಾಂಗ್ರೆಸ್ 1 ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ ಕೇವಲ 34 ಶಾಸಕರನ್ನು ಹೊಂದಿರುವ ಜೆಡಿಎಸ್ ಗೆಲುವಿಗೆ ಅನ್ಯ ಪಕ್ಷಗಳ ಸದಸ್ಯರ ಬೆಂಬಲ ಬಹಳ ಅನಿವಾರ್ಯತೆ ಬಹಳವಾಗಿದೆ.ಇಷ್ಟವಿಲ್ಲದೆ ಹೋದರೂ ಬಿಜೆಪಿ ಕಡೆ ಕಣ್ಣು ಹೊಡೆಯಬೇಕಿದೆ. ಬಿಜೆಪಿಯಿಂದ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಜೆಡಿಎಸ್ನಿಂದ ಎಚ್.ಡಿ. ದೇವೇಗೌಡ , ಹಾಗೂ ಕಾಂಗ್ರೆಸ್ ನಿಂದ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿ.ಎಸ್ ಉಗ್ರಪ್ಪ ಮತ್ತು ಮಾಜಿ ಸಂಸದ ಮುದ್ದ ಹನುಮೇಗೌಡ ಹೆಸರೂ ಬಹಳವಾಗಿ ಕೇಳಿ ಬರುತ್ತಿದೆ. ನಾಮಪತ್ರ ಸಲ್ಲಿಕೆಗೆ ಇದೇ 9 ಕೊನೆಯ ದಿನವಾಗಿದೆ.