ರಾಜ್ಯಸಭಾ ಚಳಿಗಾಲದ ಅಧಿವೇಶನ; ಶೇ.84ರಷ್ಟು ಫಲಪ್ರದ

ಎಂ. ವೆಂಕಯ್ಯ ನಾಯ್ಡು

ನವದೆಹಲಿ, ನ 30-ರಾಜ್ಯಸಭೆಯ ಚಳಿಗಾಲದ ಅಧಿವೇಶನದಲ್ಲಿ ಲೈಂಗಿಕ ಅಲ್ಪಸಂಖ್ಯಾತರು (ಹಕ್ಕುಗಳ ರಕ್ಷಣೆ) ಮಸೂದೆ ಮತ್ತು ಚಿಟ್ ಫಂಡ್ (ತಿದ್ದುಪಡಿ)ಮಸೂದೆಯ ಮಂಡನೆಯೊಂದಿಗೆ ಶೇ.84ರಷ್ಟು ಫಲಪ್ರದವಾಗಿದೆ. 

 ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಾಜ್ಯಸಭೆಯಲ್ಲಿ ಅತ್ಯುತ್ತಮ ನಿರ್ಣಯಗಳು ಮಂಡನೆಯಾಗಿವೆ. ಅಧಿವೇಶನದ ಎರಡನೇ ವಾರದಲ್ಲಿ ಲೈಂಗಿಕ ಅಲ್ಪಸಂಖ್ಯಾತರು (ಹಕ್ಕುಗಳ ರಕ್ಷಣೆ) ಮಸೂದೆ ಮತ್ತು ಚಿಟ್ ಫಂಡ್ (ತಿದ್ದುಪಡಿ)ಮಸೂದೆಗೆ ಅಂಗೀಕಾರ ದೊರೆತಿದೆ. ಇ- ಸಿಗರೇಟ್ ನಿಷೇಧಿಸುವ ಕುರಿತು ಸುಗ್ರೀವಾಜ್ಞೆ ಜಾರಿಗೆ ತರುವ ಚರ್ಚೆ ತಾರ್ಕಿಕ ಅಂತ್ಯ ತಲುಪಿಲ್ಲ  ರಾಜ್ಯಸಭೆಯ ಪ್ರಕಟಣೆ ತಿಳಿಸಿದೆ. 

  ರಾಜ್ಯಸಭೆಯಲ್ಲಿ ಸುಮಾರು ನಾಲ್ಕುವರೆ ಗಂಟೆಗಳ ಕಾಲ ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚೆ ನಡೆದಿದೆ. ಈ ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಕುರಿತು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕೇಂದ್ರ ಹಣಕಾಸು ಸಚಿವರು ಕೂಡ ಸಮಂಜಸ ಉತ್ತರ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

  ಎರಡನೇ ವಾರದಲ್ಲಿ ಒಟ್ಟು 22 ಗಂಟೆ 15 ನಿಮಿಗಳ ಕಾಲ ವಿವಿಧ ವ್ಯವಹಾರಗಳ ಕುರಿತು ಚರ್ಚೆಗಳು ನಡೆದಿವೆ. ಮೊದಲ ದಿನದಂದು ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿನ ಕುರಿತ ಗಲಭೆಯಿಂದ ಕಲಾಪ ವ್ಯರ್ಥವಾಗಿತ್ತು. ಸದಸ್ಯರು ನಿಗದಿತ ಅವಧಿಗಿಂತ ಹೆಚ್ಚು ಕಾಲ ಕುಳಿತು ಕಲಾಪ ನಡೆಸಿಕೊಟ್ಟಿದ್ದಾರೆ ಎಂದು ಪ್ರಕಟಣೆ ಉಲ್ಲೇಖಿಸಿದೆ. 

  15 ಚುಕ್ಕೆ ಪ್ರಶ್ನೆಗಳ ಪೈಕಿ ಎಲ್ಲಾ ಪ್ರಶ್ನೆಗಳಿಗೆ ಎರಡು ಬಾರಿ ಮೌಖಿಕ ಉತ್ತರ ನೀಡಿರುವುದು ದಾಖಲೆಯಾಗಿದೆ. ನಾಲ್ಕು ದಿನಗಳಲ್ಲಿ 60 ಚುಕ್ಕೆ ಪ್ರಶ್ನೆಗಳಿಗೆ 43 ಅಂದರೆ ಶೇ. 71.66 ರಷ್ಟು ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರ ನೀಡಲಾಗಿದೆ. 51 ಶೂನ್ಯ ವೇಳೆಯ ಮಂಡನೆಗಳು ಮತ್ತು 30 ವಿವಿಧ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮಂಡನೆಯಿಂದ ಸದಸ್ಯರು ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದಿದೆ.

  ಮೇಲ್ಮನೆಯಲ್ಲಿ ಮುಂದಿನ ವಾರ  ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ವಿಶೇಷ ರಕ್ಷಣಾ ತಂಡ (ತಿದ್ದುಪಡಿ) ಮಸೂದೆ, ದಾದ್ರ ಮತ್ತು ನಗರ್ ಹವೇಲಿ ಮತ್ತು ಡಾಮನ್ ಮತ್ತು ಡಿಯು ವಿಲೀನ ಮಸೂದೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದ ದೆಹಲಿ (ಅನಧಿಕೃತ ಕಾಲೋನಿಯ ನಿವಾಸಿಗಳ ಆಸ್ತಿ ಹಕ್ಕುಗಳ ಗುರುತಿಸುವಿಕೆ) ಮಸೂದೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.