ಚೆನ್ನೈ, ನ 21: ರಾಜೀವ್ ಗಾಂಧಿ ಹತ್ಯೆ ಆರೋಪಿ ರಾಬರ್ಟ್ ಪ್ಯಾಸ್ ತನ್ನ ಮಗನ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲು ಮದ್ರಾಸ್ ಹೈಕೋಟರ್್ 30 ದಿನ ಪೆರೋಲ್ ಮೇಲೆ ಬಿಡುಗಡೆಗೆ ಆದೇಶಿಸಿದೆ.
ನೆದರ್ ಲ್ಯಾಂಡ್ ನಲ್ಲಿರುವ ಮಗನ ಮದುವೆ ಸಿದ್ಧತೆಗೆ ಅನುಮತಿ ಕೋರಿದ ಅಜರ್ಿಯ ವಿಚಾರಣೆ ನಡೆಸಿದ ನ್ಯಾಯಮೂತರ್ಿ ಎಂ.ಎಂ.ಸುಂದರೇಶ್ ಮತ್ತು ಆರ್ ಎಮ್ ಟಿ ಟೀಕಾರಮಣ್ ಅವರನ್ನೊಳಗೊಂಡ ವಿಭಾಗೀಯ ಪೀಠ 30 ದಿನಗಳ ಪೆರೋಲ್ ಬಿಡುಗಡೆಗೆ ಸಮ್ಮತಿಸಿದೆ. ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ ಎಂಬ ಷರತ್ತು ವಿಧಿಸಿದೆ.
ಪ್ರಕ್ರಿಯೆಗಳು ಪೂರ್ಣಗೊಂಡ ನಂತರ 28 ವರ್ಷಗಳಿಂದ ಇರುವ ವೆಲ್ಲೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗುವುದು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳ ಪೈಕಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಸ್. ನಳಿನಿ ಅವರ ಮಗಳ ವಿವಾಹ ಸಿದ್ಧತೆಗೆ ನೀಡಲಾಗಿದ್ದ 30 ದಿನಗಳ ಪೆರೋಲ್ ಅನ್ನು ಇನ್ನೂ 21 ದಿನಗಳವರೆಗೆ ವಿಸ್ತರಿಸಿದೆ. ಆದರೆ ಇನ್ನಷ್ಟು ದಿನ ವಿಸ್ತರಣೆ ಮನವಿಯನ್ನು ನಿರಾಕರಿಸಿದೆ.
ಕೆಲವು ದಿನಗಳ ಹಿಂದೆ ಮತ್ತೊಬ್ಬ ಆರೋಪಿ ಪೇರರಿವಾಲನ್ ಅವರ ತಂದೆಯ ಅನಾರೋಗ್ಯ ಹಾಗೂ ಕುಟುಂಬದಲ್ಲಿನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು.