ಸಕ್ಕರೆ ಕಾರ್ಖಾನೆಯನ್ನು ಸಹಕಾರಿ, ಸರ್ಕಾರಿ ವಲಯದಲ್ಲಿ ಆರಂಭಿಸುವಂತೆ ರಾಜಾಧ್ಯಕ್ಷ ಎಂ. ಪ್ರಕಾಶ ಒತ್ತಾಯ
ಕಂಪ್ಲಿ 26: ಪಟ್ಟಣದ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಅಥವಾ ಸಹಕಾರಿ(ಖಾಸಗಿ) ವಲಯದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ, ಈ ಭಾಗದ ರೈತರ ಕನಸು ನನಸು ಮಾಡುವ ರಾಜ್ಯ ಸರ್ಕಾರ ಇಚ್ಚಾಸಕ್ತಿವಹಿಸಬೇಕೆಂದು ಅಖಿಲ ಕ.ರಾಜ್ಯ ಕಿಸಾನ್ ಜಾಗೃತಿ ಸಂಘದ ರಾಜಾಧ್ಯಕ್ಷ ಎಂ. ಪ್ರಕಾಶ ಒತ್ತಾಯಿಸಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸುವ ಮೂಲಕ ಈ ಭಾಗದ ಕಬ್ಬು ಬೆಳೆಗಾರರ ಹಾಗೂ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು. ಅಕ್ರಮ-ಸಕ್ರಮದಲ್ಲಿ ಸಾಕಷ್ಟು ಭೂ ರಹಿತರು ಅರ್ಜಿ ಹಾಕಿದ್ದರು. ಅಕ್ರಮ-ಸಕ್ರಮ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಇದರಿಂದ ಅನ್ಯಾಯವಾಗುತ್ತಿದೆ. ಆದ್ದರಿಂದ ಮತ್ತೊಮ್ಮೆ ಅರ್ಜಿ ಹಾಕಲಿದ್ದು, ಅರ್ಜಿ ಪರೀಶೀಲಿಸಿ, ಪಟ್ಟಾ ಕೊಡಬೇಕು. ಹೀಗೆ ರೈತರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಸರ್ಕಾರ ಮತ್ತು ಅಧಿಕಾರಿಗಳು ಮಾಡಬೇಕು ಎಂದರು.
ನಂತರ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರ ಬದುಕು ಅತಂತ್ರವಾಗಿದೆ. ರೈತರು ಬೆಂಬಲ ಬೆಲೆ ಇಲ್ಲದೇ, ಸಂಕಷ್ಟವನ್ನು ಅನುಭವಿಸುತ್ತಿದ್ದು, ಸರ್ಕಾರಗಳು ಮಾತ್ರ ರೈತರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಆದ್ಧರಿಂದ ರೈತರ ಬಗ್ಗೆ ಕಾಳಜಿ ತೋರಿ, ರೈತರ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಕಂಪ್ಲಿ ಭಾಗದಲ್ಲಿ ಈಗಾಗಲೇ ಭತ್ತ ಬೆಳೆಗಳ ಕಟಾವು ನಡೆಯುತ್ತಿದ್ದು, ಆದರೆ, ಬೆಲೆ ಇಲ್ಲದ ಪರಿಣಾಮ ರೈತರು ಹಾಕಿದ ಖರ್ಚು ತೆಗೆದುಕೊಳ್ಳುವುದು ಕಷ್ಟಕರವಾಗಿದೆ. ದಲ್ಲಾಳಿಗಳ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಆದ್ದರಿಂದ ಕೂಡಲೇ ಕಂಪ್ಲಿಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಮತ್ತು ರೇಷ್ಮೆ ಇಲಾಖೆ ಕಛೇರಿಯನ್ನು ಕಂಪ್ಲಿಯಲ್ಲಿ ಆರಂಭಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷ ಡೆಲ್ಲಿ ಭೀಮಪ್ಪ, ಉಪಾಧ್ಯಕ್ಷರಾದ ಹನುಮಂತಪ್ಪ, ಬಸವರಾಜ, ಪ್ರಧಾನ ಕಾರ್ಯದರ್ಶಿ ವೆಂಕಟೇಶ, ಸಂಘಟನಾ ಕಾರ್ಯದರ್ಶಿ ದೇವರಾಜ ಸೇರಿದಂತೆ ರೈತರು ಇದ್ದರು.
ಆಯ್ಕೆ: ಇಲ್ಲಿನ ಅತಿಥಿ ಗೃಹದಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ವಿಶ್ವನಾಥ(ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಹರ್ಷಿತ್(ಯೂತ್ ಜಿಲ್ಲಾಧ್ಯಕ್ಷ), ಗುಬಾಜಿ ರಾಮಾಂಜಿನಿ(ತಾಲೂಕಾಧ್ಯಕ್ಷ), ಹನುಮಂತಪ್ಪ(ಗೌರವಾಧ್ಯಕ್ಷ), ಗಾದಿಲಿಂಗ ಉಳೇನೂರು, ವಾಬಣ್ಣ, (ಉಪಾಧ್ಯಕ್ಷ), ಶಿವು(ಯೂತ್ ತಾಲೂಕಾಧ್ಯಕ್ಷ), ಲಕ್ಷ್ಮೀರೆಡ್ಡಿ, ಶಿವು, ಶರಣಪ್ಪ(ಪದಾಧಿಕಾರಿ ಅಮರನಾಥಗೌಡ(ದೇವಲಾಪುರ ಗ್ರಾಮ ಘಟಕ ಅಧ್ಯಕ್ಷ), ದೇವರ ಅಂಜಿನಪ್ಪ(ಉಪಾಧ್ಯಕ್ಷ), ಮಂಜುನಾಥ(ರಾಮಸಾಗರ ಘಟಕ ಅಧ್ಯಕ್ಷ), ವೀರನಗೌಡ(ಉಪಾಧ್ಯಕ್ಷ), ಕುರಿ ನಾಗಪ್ಪ(ದೇವಸಮುದ್ರ ಗ್ರಾ.ಮ ಅಧ್ಯಕ್ಷ) ಇವರನ್ನು ರಾಜ್ಯಾಧ್ಯಕ್ಷ ಎಂ.ಪ್ರಕಾಶ ನೇತೃತ್ವದಲ್ಲಿ ಹಾಗೂ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಲಾಯಿತು. ನ.001: ಕಂಪ್ಲಿಯಲ್ಲಿ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಲಾಯಿತು.