ಬ್ಯಾಡಗಿ 04: ಪಟ್ಟಣದ ಸುಭಾಷ್ ನಗರಕ್ಕೆ ಹಾದು ಹೋಗುವ ರಾಜಕಾಲವೆಯನ್ನು ಶೀಘ್ರದಲ್ಲಿಯೇ ಕಾಮಗಾರಿ ಚಾಲನೆ ಮಾಡಲಾಗುವುದೆಂದು ಶಾಸಕ ಬಸವರಾಜ್ ಶಿವಣ್ಣನವರು ಹೇಳಿದರು ಇಂದು ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದವರು ಕಳೆದ ಕೆಲವು ದಿನಗಳ ಹಿಂದೆ ಭಾರಿ ಮಳೆ ಬಂದು ಸುಭಾಷ್ ನಗರದ ಮನೆಗಳಿಗೆಲ್ಲ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು ಹೀಗಾಗಿ ಶೀಘ್ರದಲ್ಲಿಯೇ ಹೊಸ ಕಾಂಟ್ರಾಕ್ಟರ್ ಮೂಲಕ ಚಾಲನೆಯನ್ನು ಮಾಡಲಾಗುವುದು ಮತ್ತು ಅಧಿಕಾರಿಗಳಿಗೆ ಒಟ್ಟು 1,350 ಮೀಟರ್ ಕಾಲುವೆಯನ್ನು ಮಾಡಲಾಗುವುದು ಎಂದು ಹೇಳಿದರು ಈಗಾಗಲೇ ರಾಜಕಾಲುವೆಗೆ ಕಳೆದ ಸರಕಾರವು 10 ಕೋಟಿ, ಮಂಜೂರಾಗಿತ್ತು ಕಳೆದ ಬಾರಿ ಟೆಂಡರ್ ತೆಗೆದುಕೊಂಡಿದ್ದ ಕಾಂಟ್ರಾಕ್ಟರ್ ಇನ್ನೂ ಯಾರು ಬಂದಿರುವುದಿಲ್ಲ ಆದ ಕಾರಣ ಹೊಸ ಕಾಂಟ್ರಾಕ್ಟರ್ ಲೋಕಲ್ ಇರುವವರನ್ನು ಸೂಚಿಸಲಾಗಿದೆ ಮತ್ತು ಸರ್ವೇ ಮಾಡಿ ಸರ್ವೇ ಪ್ರಕಾರ ಒತ್ತೂರಿಯಾದ ಜಾಗವನ್ನು ಯಾವುದೇ ಮುಲಾಜಿ ಇಲ್ಲದೆ ತೆರವುಗೊಳಿಸಿ ರಾಜ ಕಾಲುವೆ ಮಾಡಲಾಗುವುದು ಎಂದು ಹೇಳಿದರು.ಮತ್ತು ಪಟ್ಟಣದ ಅವಶ್ಯಕತೆ ಇದ್ದಲ್ಲಿ ಹೈಮಾಸ್ಕ್ ಹಾಕಲಾಗುವುದು ಸಂತೆ ಮೈದಾನದಲ್ಲಿ ಮೌಂಸ ಮಾರುಕಟ್ಟೆ ಮಾಡಲು ಅನುಕೂಲತೆ ಮಾಡಿಕೊಡಲಾಗುವುದೆಂದು ಸೂಚನೆ ನೀಡಲಾಯಿತು.
3.09. 2024 ಸಾಮಾನ್ಯ ಸಭೆ ಹಾಗೂ 14 10 24ರ ತುರ್ತು ಸಭೆಯ ಠರಾವುಗಳನ್ನು ಓದಿ ದೃಡಿಕರಿಸಲಾಯಿತು ಮತ್ತು ಯುಜಿಡಿ ಬಳಕೆಯ ಶುಲ್ಕವನ್ನು ಮುಂಬರುವ ಆರ್ಥಿಕ ವರ್ಷದಿಂದ ಪ್ರತಿವರ್ಷ ತರಿಗೆ ಭರಣಾ ಮಾಡುವ ಸಮಯದಲ್ಲಿ ಸಾರ್ವಜನಿಕರಿಂದ ಮನೆಗಳಿಗೆ ತಿಂಗಳೀಗೆ 15 ರೂ ಶುಲ್ಕ.ಸ್ಕೂಲ ಸಂಭಾಂಗಣ ಗಳಿಗೆ 30 ತುಂಬಿಸಿಕೊಳ್ಳಲು ಸೂಚಿಸಲಾಯಿತು ಅಗಸ್ಟ್ ಸಪ್ಟೆಂಬರ್ ಅಕ್ಟೋಬರ್ 24ರ ತಿಂಗಳ ಜಮಾ ಖರ್ಚಿಗೆ ಮಂಜೂರಾತಿ ನೀಡಲಾಯಿತು. 24 ಜನರ ಪಾವತಿ ಅಡಿ ನೇಮಕಾತಿಯಾದ ಪೌರಕಾರ್ಮಿಕರ ವೇತನವನ್ನು ಪುರಸಭೆಯ ನಿಧಿಯಡಿ ಪಾವತಿಸಲು ಅನುಮೋದನೆ ನೀಡಲಾಯಿತು. ಸನ್ 2015.16 ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದ ಉಳಿತಾಯ ಮತ್ತು 0.49 ಲಕ್ಷ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಲಾಯಿತು 2024 25ನೇ ಸಾಲಿನ ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿಗಳ ವಾರ್ಷಿಕ ಟೆಂಡರ್ ಕರೆಯಲು ಅನುಮೋದಿಸಲಾಯಿತು.
ಸನ್ 2019ನೇ 20ನೇ ಸಾಲಿನ ಎಸ್ ಎಫ್ ಸಿ ಟಿ ಎಸ್ ಪಿ ಅನುದಾದಲ್ಲಿ ಉಳಿತಾಯವಾದ 26 ಲಕ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಯಿತು ಮತ್ತು 2018ನೇ 19 ನೇ ಸಾಲಿನ ಎಸ್ ಎಫ್ ಐ ವಿಶೇಷ ಅನುದಾನದ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರ ಬಾಕಿ ಮೊತ್ತ ಪುರಸಭೆಯ ಸಾಮಾನ್ಯ ನಿಧಿಯಲ್ಲಿ ಪಾವತಿಸಲು ಸೂಚನೆ ನೀಡಲಾಯಿತು.ಸಂತೆ ಮೈದಾನದಲ್ಲಿ ಚಿಕನ್ ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸಲು ಅಂದಾಜು ಮೊತ್ತ 5 ಲಕ್ಷ ಆಡಳಿತಾತ್ಮಕ. ಪುರಸಭೆ ವ್ಯಾಪ್ತಿಯ ವಿದ್ಯಾ ನಗರ ಹಾರಡಕರ ಪ್ಲಾಟ್ ಶಿವಪುರ ಬಡಾವಣೆಯಲ್ಲಿರುವ ಸಿ ಎ ಸೈಟುಗಳಿಗೆ ಪೆನ್ನಿಂಗ್ ಅಳವಡಿಸಲು 4.50 ಲಕ್ಷಗಳಿಗೆ ತಯಾರಿಸಿದ ಕ್ರಿಯಾಯೋಜರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಸೂಚಿಸಿದರು. ಪುರಸಭೆಯ ಕಾಕೋಳ ರಸ್ತೆ ಕಲಾಭವನ ರಸ್ತೆ. ಆಶ್ರಯ ಬಡಾವಣೆಗಳಿಗೆ ನಾಮ ಫಲಕ ಅಳವಡಿಸುವ ಅಂದಾಜು ಮೊತ್ತ 5 ಲಕ್ಷ ಗಳಿಗೆ ಮಂಜುರಾತಿ ನೀಡಲು ಸೂಚಿಸಲಾಯಿತು. ಮುಖ್ಯರಸ್ತೆಯಲ್ಲಿ ಶಿಥಿಲ ವ್ಯವಸ್ಥೆ ಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಲಾಯಿತು ನೆಹರು ನಗರದ ಭಂಗಿ ರಸ್ತೆ ತೆರವುಗೊಳಿಸಲು ಸೂಚಿಸಿದರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಏಕ ನಿವೇಶನ ಹಾಗೂ ಹುನಿವೇಶನ ಲೇಓಟ್ ಗಳಿಗೆ ಎಡಿಟಿಪಿ ಅವರಿಂದ ಅನುಮೋದಿತ ತಾತ್ಕಾಲಿಕ ವಿನ್ಯಾಸ ನಕ್ಷೆ ಹಾಗೂ ಅಂತಿಮ ನಕ್ಷೆ ಗಳಿಗೆ ಅನುಮೋದನೆ ನೀಡಲಾಯಿತು.
ಟೀಚರ್ಸ್ ಕಾಲೋನಿ ಅಲ್ಲಿರುವ 160/ಕ ಫ್ಲಾಟ್ ನಂಬರ್ 41 ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಿದ ಜಾಗವನ್ನು ಅಗಂನವಾಡಿ ಕೇಂದ್ರಕ್ಕೆ ನೀಡಲು ಶಾಸಕರು ಸೂಚಿಸಿದರು. ಸಾರ್ವಜನಿಕ ಸ್ಕಥಳಗಳಲ್ಲಿ ಕಸ ಎಸೆದಂತೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಲಾಯಿತು. ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಎ ಎಚ್ ಪಿ ಯೋಜನೆ ಗೃಹ ನಿರ್ಮಾಣಕ್ಕಾಗಿ ಪೌರಕಾರ್ಮಿಕರ ಫಲಾನುಭವಿಗಳನ್ನು ಆಯ್ಕೆ ಮಾಡಲು ಸೂಚಿಸಲಾಯಿತು ವಿವಿಧ ಕೆಲಸಗಳಿಗೆ ಸೂಚಿಸಲಾಯಿತು.ನೀರು ಸರಬರಾಜುದಲ್ಲಿ ವೈತ್ಯೆಯ ಬರುತ್ತಿದ್ದು ಇದಕ್ಕೆ ತಾಲೂಕಿನ ಎರಡು ಗ್ರಾಮ ಪಂಚಾಯತಿಗಳಲ್ಲಿ ನೀರು ಪೋಲಾಗುತ್ತಿದೆ ಎಂಬ ಮಾತು ಕೇಳು ಬಂದಿತ್ತು ಅಧಿಕಾರಿಗಳ ಮೂಲಕ ಕೇಳಿದಾಗ ಪಟ್ಟಣಕ್ಕೆ ಒಟ್ಟು 75 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು ಈಗ ನಮಗೆ ಕೇವಲ 40, ಲಕ್ಷ ಲೀಟರ್ ನೀರು ಬರುತ್ತಿದೆ ಹಾಗಾಗಿ ಪಟ್ಟಣಕ್ಕೆ ಕುಡಿಯೋ ನೀರು ಸಾಕಾಗುತ್ತಿಲ್ಲ ಒಟ್ಟು ಮುದೇನೂರು ಜಾಕ್ ವೆಲ್ನಿಂದ 75 ಲಕ್ಷ ಲೀಟರ್ ನೀರು ಬರುತ್ತಿದ್ದು ಪಟ್ಟಣಕ್ಕೆ 40 ಲಕ್ಷ ಲೀಟರ್ ನೀರು ಮಾತ್ರ ಬರುತ್ತಿದೆ ಬಾಕಿ ನೀರು ಹುಲಿ ಹಳ್ಳಿ ಅಸುಂಡಿ ಕದರಮಂಡಲಗಿ ಹಳ್ಳಿಗಳಿಗೆ ಸರಬರಾಜ ಆಗುತ್ತಿದೆ ಹಾಗಾಗಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ ಹಾಗೂ ಕದರಮಂಡಲಗಿ ಹಾಗೂ ಅಸುಂಡಿ ಪಂಚಾಯತಿ ಅಧಿಕಾರಿಗಳು ಕರೆಸಿ ನಿರು ಸರಬರಾಜು ಆಗುವ ಪೈಪಗೆ 2.3 ಲೈನಗಳನ್ನು ಹಾಕಲಾಗಿದೆ ಇದರಿಂದ ಕುಡಿಯುವ ನೀರು ಪೊಲಾಗುತ್ತಿದೆ ಕೆವಲ ಒಂದು ನೀರನ ಲೈನನ್ನು ಬಳಕೆ ಮಾಡಿ ಗ್ರಾಮಕ್ಕೆ ನೀರು ಪೂರೈಸಲು ಸೂಚಿಸಿದರು ಮತ್ತೆ ಗ್ರಾಮದವರು ಒಂದು ಲೈನ್ ಬಿಟ್ಟು ಹೇಚ್ಚಿನ ಲೈನ್ ತೆಗೆದುಕೊಂಡರೆ ಅದಕ್ಕೆ ಅಧಿಕಾರಿಗಳು ಹೊಣೆ ಆಗುತ್ತಾರೆ ಎಂದು ಖಡಕ್ಕಾಗಿ ಸೂಚಿಸಿದರು. ಕದರಮಂಡಲಗಿ ಗ್ರಾಮದಲ್ಲಿ 6,00,000 ಲೀಟರ್ ಹಿಡಿಯುವ ಸಾಮರ್ಥ್ಯದ ನೀರಿನ ಸೊಂಪು ತಯಾರಿಸಲು ಅಧಿಕಾರಿಗಳಿಗೆ ಸೂಚನೆ.ಗದ್ದಲ ಇಸ್ಲಾಂಪುರ ಓಣಿ ಸದಸ್ಯ ಮೆಹಬೂಬ್ ಅಗಸನಹಳ್ಳಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಮಾಡಿದ್ದು ಅದಕ್ಕೆ ಮನೆಯ ಬಳಸಿದ ನೀರಿನ ಕಲೆಕ್ಷನ್ ಮಾಡಲು ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯ ಅಧಿಕಾರಿಗಳು ಅಂತಹ ಯಾವುದಾದರೂ ಹಣ ಕೇಳಿದರೆ ಕೂಡಲೇ ಅಂಥವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಪುರಸಭೆ ಸದಸ್ಯ ಶಿವರಾಜ ಅಂಗಡಿ ಮಾತನಾಡಿ ಪಟ್ಟಣದಲ್ಲಿ ಈಗಾಗಲೇ ಯುಜಿಡಿ ಕಾಮಗಾರಿಯೂ ಕಳಪೆಯಾಗಿದ್ದು ಕಾಲುವೆಗಳಲ್ಲಿ ಪೈಪ್ ಲೈನ್ ಗಳು ಅಳವಡಿಸಲಾಗಿದೆ ಇದರಿಂದ ಮಳೆ ಬಂದರೆ ನೀರು ಸರಾಗವಾಗಿ ಹೋಗದೆ ಬ್ಲಾಕ್ ಆಗಿ ಅಲ್ಲಿಯೇ ನಿಂತು ರೋಡ್ ಮೇಲ್ಗಡೆ ಬರುತ್ತಿದೆ ಕೂಡಲೇ ತೆರವುಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲ್ಪಾ ಚಂದ್ರ ಗೌಡ ಪಾಟೀಲ್ ಉಪಾಧ್ಯಕ್ಷರು ಸುಭಾಷ್ ಮಾಳಗಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್ ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ ಮಾಜಿ ಅಧ್ಯಕ್ಷ ಬಸಣ್ಣ ಚತ್ರದ. ಫಕೀರ್ಪ ಚಲವಾದಿ. ರಾಜಣ್ಣ ಕೋಡಿಹಳ್ಳಿ. ಶಂಕರ್ ಕುಸಗುರ.ರಾಜು ಕಳ್ಯಾಳ.ವಿನಯಕುಮಾರ ಹೀರೆಮಠ ಸರೋಜಾ ಉಳ್ಳಾಗಡ್ಡಿ ಕಲಾವತಿ ಬಡಿಗೇರ್ ಹಾಗೂ ಎಲ್ಲಾ ಸದಸ್ಯರು ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.ನಾಮನಿರ್ದೆಶಿತ ಸದಸ್ಯರು ಉಪಸ್ಥಿತರಿದ್ದರು.