ಮಳೆ ಅನಾಹುತ: ಕರಾವಳಿ ಜಿಲ್ಲೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ತಂಡ

ಮಂಗಳೂರು,   ಜೂನ್ 2, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು,ಪರಿಣಾಮ  ಕರಾವಳಿ ಭಾಗದಲ್ಲಿ ಎರಡು ದಿನಗಳ ಭಾರಿ, ಬಿರುಗಾಳಿ,    ಮಳೆಯಾಗಲಿದ್ದು,  ಮುಂದಿನ ಅನಾಹುತ ತಡೆಗೆ  ತಡೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ತಂಡ ಇದೆ 4ರಂದು    ಜಿಲ್ಲೆಗೆ ಆಗಮಿಸಲಿದೆ. ಹೀಗಾಗಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ  ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ ಕರಾವಳಿ ಜಿಲ್ಲೆಗಳಲ್ಲಿ  ಇಂದು  115.6 ಮಿ.ಮೀ.ನಿಂದ 204.4 ಮಿ.ಮೀ.ಮಳೆಯಾಗಲಿದೆ, ಈ ವೇಳೆ ಗುಡುಗು ಮತ್ತು ಗಾಳಿ ಕೂಡ ಬಿರುಸುಗೊಳ್ಳುವ  ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರಿಕೆಗೆ ನಿಷೇದಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ತಂಡ  ಬರಲಿದೆ.   ಕೇರಳಕ್ಕೆ ಮುಂಗಾರು ಜೂನ್ ಒಂದರಂದು ಪ್ರವೇಶಿಸಿದ್ದು, ಈ ಚಂಡಮಾರುತದ  ಪರಿಣಾಮ ಕರಾವಳಿಯ ಮೇಲೂ  ಬೀರಲಿದೆ ಎನ್ನಲಾಗಿದೆ.