ಮುಂದಿನ ಮೂರು ದಿನ ಬೆಂಗಳೂರಲ್ಲಿ ಮಳೆ ಸಾಧ್ಯತೆ

ಬೆಂಗಳೂರು, ಮೇ 25,  ಮುಂದಿನ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು,  ಎಚ್ಚರಿಕೆಯಿಂದಿರುವಂತೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ  ಡಾ.ಶ್ರೀನಿವಾಸ್ ರೆಡ್ಡಿ ಮುನ್ಸೂಚನೆ ನೀಡಿದ್ದಾರೆ.ಅರಬ್ಬೀ ಸಮುದ್ರ, ಬಂಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದೆ ಎಂದಿದ್ದಾರೆ. ಕಳೆದೊಂದು ದಿನದಿಂದ ರಾಜಧಾನಿಯಲ್ಲಿ ಮಳೆ ಆಗುತ್ತಿದೆ. ಭಾನುವಾರ ಮಧ್ಯಾಹ್ನ  ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿದ ಪರಿಣಾಮ ಹಲವೆಡೆ ಮರಗಳು  ಧರೆಗುಳಿದಿದ್ದವು. ಲಾಕ್‌ಡೌನ್‌ ಕರ್ಪ್ಯೂ ಇದ್ದ ಪರಿಣಾಮ ಜನಸಂಚಾರ ವಾಹನ ಸಂಚಾರವಿಲ್ಲದೇ  ಯಾವುದೇ ದುರ್ಘಟನೆ, ಅನಾಹುತ ಸಂಭವಿಸಿರಲಿಲ್ಲ.ಆದರೆ ಬುಧವಾರದಿಂದ ಮಳೆ ಹೆಚ್ಚಾಗಿ ಅಬ್ಬರಿಸುವ ಸಾಧ್ಯತೆಯಿದೆ. ಮೂರು ದಿನ ಸಂಜೆ ಹೊತ್ತಿಗೆ ಮಳೆಸುರಿಯುವುದರಿಂದ ಕಚೇರಿಯಿಂದ ಹೊರಬರುವ ಸಮಯವಿದಾಗಿದ್ದು, ಮರ ಬೀಳುವ ವಿದ್ಯುತ್ ಕಂಬ ಬೀಳುವ ಸಂಭವವಿದೆ. ಚರಂಡಿ, ರಸ್ತೆ ಗುಂಡಿಯಿಂದ ರಕ್ಷಿಸಿಕೊಳ್ಳುವಂತೆ ಮಳೆಯಲ್ಲಿ ಓಡಾಡದಂತೆ ಎಚ್ಚರಿಕೆಯಿಂದಿರಲು ಹೇಳಿದ್ದಾರೆ.