ರೋನಿತ್ ಮಾರಕ ದಾಳಿಗೆ ಹಳಿ ತಪ್ಪಿದ ರೈಲ್ವೇಸ್ : ಕರ್ನಾಟಕಕ್ಕೆೆ 10 ವಿಕೆಟ್ ಭರ್ಜರಿ ಜಯ

ನವದೆಹಲಿ, ಜ 30 :     ರೋನಿತ್ ಮೋರೆ (32 ಕ್ಕೆೆ 6) ಅವರ ಮಾರಕ ದಾಳಿಯ ಸಹಾಯದಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಿಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. 

ನಾಲ್ಕನೇ ಹಾಗೂ ಅಂತಿಮ ದಿನವಾದ ಗುರುವಾರ ಒಂಬತ್ತು ವಿಕೆಟ್ ಕಳೆದುಕೊಂಡು 199 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿದ ಕರ್ನಾಟಕ ತಂಡ, 71.1 ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ರೈಲ್ವೇಸ್ ತಂಡ 30 ಓವರ್‌ಗಳಿಗೆ 79 ರನ್ ಗಳಿಗೆ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಕರ್ನಾಟಕಕ್ಕೆೆ 51 ರನ್ ಗುರಿ ನೀಡಿತು. ಗುರಿ ಹಿಂಬಾಲಿಸಿದ ಕರ್ನಾಟಕ ತಂಡ  8.2 ಓವರ್‌ಗಳಿಗೆ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಗೆಲುವಿನೊಂದಿಗೆ ಕರುಣ್ ನಾಯರ್ ಪಡೆ ಏಳು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಜತೆಗೆ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.

ದ್ವಿತೀಯ ಇನಿಂಗ್ಸ್‌ ಆರಂಭಿಸಿದ ರೈಲ್ವೇಸ್ ತಂಡಕ್ಕೆೆ ವೇಗಿ ರೋನಿತ್ ಮೋರೆ ಹಾಗೂ ಅಭಿಮನ್ಯು ಮಿಥುನ್ ಸರ್ಜರಿ ಮಾಡಿದರು. ಆರಂಭದಿಂದಲೂ ಅದ್ಭುತ ಬೌಲಿಂಗ್ ಮಾಡಿದ ಇವರಿಬ್ಬರು ರೈಲ್ವೇಸ್ ತಂಡವನ್ನು ಹಳಿ ತಪ್ಪಿಸಿದರು. 11 ಓವರ್ ಬೌಲಿಂಗ್ ಮಾಡಿದ ರೋನಿತ್ ಮೋರೆ 32 ರನ್ ನೀಡಿ ಆರು ವಿಕೆಟ್ ಗೊಂಚಲು ಪಡೆದರು. ಇವರಿಗೆ ಸಾಥ್ ನೀಡಿದ ಅಭಿಮನ್ಯು ಮಿಥುನ್ 17 ರನ್ ನೀಡಿ ಮೂರು ವಿಕೆಟ್ ಪಡೆದರು. 

ರೈಲ್ವೇಸ್ ಪರ ಆರಂಭಿಕ ಬ್ಯಾಟ್ಸ್‌‌ಮನ್ ಮೃನಾಲ್ ದೇವದರ್ 38 ರನ್ ಗಳಿಸಿದ್ದು, ಬಿಟ್ಟರೆ ಇನ್ನುಳಿದವರು ವೈಯಕ್ತಿಕ ಎರಡಂಕಿ ದಾಟಲೇ ಇಲ್ಲ. ಇದರಲ್ಲಿ ನಾಲ್ವರು ಬ್ಯಾಟರ್ ಗಳು ಶೂನ್ಯಕ್ಕೆೆ ವಿಕೆಟ್ ಒಪ್ಪಿಸಿದರು.

ಸುಲಭ ಮೊತ್ತದ ಗುರಿ ಹಿಂಬಾಲಿಸಿದ ಕರ್ನಾಟಕವನ್ನು ಆರಂಭಿಕರಾದ ರೋಹನ್ ಕದಮ್ ಹಾಗೂ ದೇವದತ್ತ ಪಡಿಕ್ಕಲ್ ಜೋಡಿ ಬಹುಬೇಗ ಗೆಲುವಿನ ದಡ ಸೇರಿಸಿದರು. ರೋಹನ್ 27 ಹಾಗೂ ಪಡಿಕ್ಕಲ್ ಅಜೇಯ 24 ರನ್ ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್

ರೈಲ್ವೇಸ್

ಪ್ರಥಮ ಇನಿಂಗ್ಸ್‌: 182

ದ್ವಿತೀಯ ಇನಿಂಗ್ಸ್‌: 30 ಓವರ್‌ಗಳಲ್ಲಿ 79/10( ಮೃನಾಲ್ ದೇವದರ್ 38; ರೋಹನ್ ಕದಮ್ 32 ಕ್ಕೆೆ 6, ಅಭಿಮನ್ಯು ಮಿಥುನ್ 17 ಕ್ಕೆೆ 3)

ಕರ್ನಾಟಕ

ಪ್ರಥಮ ಇನಿಂಗ್ಸ್‌: 71.1 ಓವರ್‌ಗಳಿಗೆ 211/10 

ದ್ವಿತೀಯ ಇನಿಂಗ್ಸ್‌: 8.2 ಓವರ್‌ಗಳಲ್ಲಿ 51/0 (ರೋಹನ್ ಕದಮ್ ಔಟಾಗದೆ 27, ದೇವದತ್ತ ಪಡಿಕ್ಕಲ್ ಔಟಾಗದೆ 24)