ನವದೆಹಲಿ, ಡಿಸೆಂಬರ್ 27 ,ರೈಲ್ವೇ ಮಂಡಳಿಯ ಎಲ್ಲ ನೇಮಕಾತಿಯನ್ನು ಇನ್ನು ಮುಂದೆ
ಕೇಂದ್ರೀಯ ಲೋಕಸೇವಾ ಆಯೋಗದ ಮೂಲಕವೇ ನಡೆಸಲು ರೈಲ್ವೆ
ಇಲಾಖೆ ತೀರ್ಮಾನಿಸಿದೆ. ಇದರ ಜತೆಗೆ ಐದು ವಿಶೇಷ ರೀತಿಯ
ವಿಭಾಗಗಳು ಇರಲಿವೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಪ್ರಕಟಿಸಿದ್ದಾರೆ .ಇದಕ್ಕಾಗಿ ಯುಪಿಎಸ್ ಸಿ ಪೂರ್ವ ಭಾವಿ ಪರೀಕ್ಷೆಯ ಮಾದರಿಯಂತೆಯೇ
ನಡೆಸಲಾಗುವುದು ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ
ಉತ್ತೀರ್ಣರಾದವರು ಐಆರ್ಎಂಎಸ್ ಸೇವೆಯನ್ನು ಐದು ಆಯ್ಕೆಯ ವಿಭಾಗಗಳಲ್ಲಿ ಹುದ್ದೆ ಪಡೆಯವ ಅರ್ಹತೆ ಪಡೆಯಲಿದ್ದಾರೆ.
ಇದೇ ವೇಳೆ ಪ್ರಯಾಣಿಕ, ರೈಲು ಸರಕು ಸೇವಾ ದರಗಳ ಪರಿಷ್ಕರಣೆ
ಮಾಡುವ ಬಗ್ಗೆಯೂ ಗಂಭೀರ ಅಲೋಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.