ರಾಯಬಾಗ ತಾಲೂಕು ಮಟ್ಟದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಮಾವೇಶಸ್ಕೌಟ್ಸ್‌ ಗೈಡ್ಸ್‌ನಿಂದ ಸಾಮಾಜಿಕ ಬದಲಾವಣೆ ಸಾಧ್ಯ : ಅತ್ತಾರ

Raibag taluk level Scouts and Guides convention Social change possible through Scouts Guides: Attara

ರಾಯಬಾಗ ತಾಲೂಕು ಮಟ್ಟದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಮಾವೇಶಸ್ಕೌಟ್ಸ್‌ ಗೈಡ್ಸ್‌ನಿಂದ ಸಾಮಾಜಿಕ ಬದಲಾವಣೆ ಸಾಧ್ಯ : ಅತ್ತಾರ 

ಹಾರೂಗೇರಿ  4 : ಏನನ್ನೂ ಆಸೆ ಪಡದೆ ಮತ್ತೊಬ್ಬರಿಗೆ ಒಳಿತನ್ನು ಮಾಡುವಂತಹ ಸಮಾಜ ಸೇವೆ ಮಾಡುವುದನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಲಿಸಲಿದ್ದು ಇದರಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಜೀವನದಲ್ಲಿ ಶಿಸ್ತು ಸಂಯಮ ಹಾಗೂ ಜ್ಞಾನ ಪಡೆದುಕೊಳ್ಳಬೇಕು. ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ಸಾಮಾಜಿಕ ಬದಲಾವಣೆ ಸಾಧ್ಯವಿದೆ ಎಂದು ಬೆಳಗಾವಿಯ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಡಿ.ಬಿ.ಅತ್ತಾರ ಹೇಳಿದರು.  ಪಟ್ಟಣದ ಸರಕಾರಿ ಕೇಂದ್ರ ಶಾಲೆಯ ಸಭಾಭವನದಲ್ಲಿ ಮಂಗಳವಾರ ನಡೆದ ರಾಯಬಾಗ ತಾಲೂಕು ಮಟ್ಟದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯಿಂದ ಕಲಿಯುವ ಶಿಸ್ತು ಸಮಯಪ್ರಜ್ಞೆ ಹಾಗೂ ಸೇವಾ ಚಟುವಟಿಕೆಗಳು ಐಎಎಸ್ ಐಪಿಎಸ್‌. ಐಆರ್‌ಎಸ್ ಸೇರಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಲು ವಿಫುಲ ಅವಕಾಶಗಳಿವೆ. ಪ್ರತಿಯೊಂದು ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಘಟಕಗಳನ್ನು ತೆರೆದು ಮಕ್ಕಳಲ್ಲಿ ಬದಲಾವಣೆ ಮತ್ತು ಪರಿವರ್ತನೆ ತರಲು ಶ್ರಮಿಸಬೇಕೆಂದು ಹೇಳಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಘಟಕ ಎನ್‌.ಜಿ.ಪಾಟೀಲ ಮಾತನಾಡುತ್ತ ಶಾಲಾ ಮಕ್ಕಳಲ್ಲಿ ಶಿಸ್ತನ್ನು ಮೂಡಿಸಲು ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷ ಗಜಾನನ ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅತ್ಯಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಎಂ.ಪಿ.ಜೀರಗಿಹಾಳ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸತ್ಯ ಮತ್ತು ಪ್ರಾಮಾಣಿಕತೆ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೂಲಕ ಮಕ್ಕಳಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಬಿತ್ತಬೇಕಿದೆ. ದಾರಿ ತಪ್ಪುತ್ತಿರುವ ಮಕ್ಕಳನ್ನು ಸನ್ಮಾರ್ಗದೆಡೆಗೆ ಕರೆದೊಯ್ಯಲು ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಗತ್ಯವಿದೆ ಎಂದರು.   ಈವೇಳೆ ಸರದಾರ ಜಮಾದಾರ ಹಾರೂಗೇರಿ ವಲಯದ ಪ್ರಧಾನ ಕಾರ್ಯದರ್ಶಿ ಮತ್ತು ಸಿ.ಎಸ್‌.ಹಿರೇಮಠ ಸಹಾಯಕ ಕಾರ್ಯದರ್ಶಿ ಮತ್ತು ಶಬಾನಾ ದೇಸಾಯಿ ಗೈಡ್ಸ್‌ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಎಚ್‌.ಡಬ್ಲೂ.ಬಿ ರಾಜ್ಯಮಟ್ಟದ ತರಬೇತಿ ಪಡೆದ ಎಸ್‌.ಬಿ.ಡೊಂಬಾರ ಮತ್ತು ಜಿ.ಬಿ.ಪಟ್ಟಣಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌.ಟಿ ಅರಬಳ್ಳಿ ವೈ.ಕೆ.ಭಜಂತ್ರಿ ಪ್ರೊ.ಬಸವರಾಜ ಕೊಕಟನೂರ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಆರ್‌.ಬಿ.ಖೇಮಲಾಪೂರೆ ಸಿ.ಬಿ.ಮುಂಡರಗಿ, ಎಸ್‌.ಆರ್‌.ಕದಮ್ ಅಕ್ಷತಾ ಕಾಂಬಳೆ ಎಸ್‌.ಎಸ್‌.ಪೋಲಿಸ್ ಗೀತಾ ಸುತಾರ ಮಂಜುಳಾ ವಿ.ಎಚ್ ಹಾಗೂ ತಾಲೂಕಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಮಹಾಂತೇಶ ಮುಗಳಖೋಡ ಕಾರ್ಯಕ್ರಮ ನಿರೂಪಿಸಿದರು.