ಮುಂಬೈ, ಏ 20,ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ತಮ್ಮ ಬ್ರ್ಯಾಂಡ್ ಗಲ್ಲಿ ಜತೆಗೆ 2019ರ ವಿಶ್ವ ಕಪ್ ಬ್ಯಾಟ್ ಸೇರಿದಂತೆ ತಮ್ಮ ಕ್ರಿಕೆಟ್ ನ ಹಲವು ಸ್ಮರಣಿಕೆಗಳನ್ನು ಹರಾಜಿಗಾಗಿ ದಾನ ಮಾಡಿದ್ದಾರೆ. ಈ ಹರಾಜಿನಿಂದ ಬರುವ ಎಲ್ಲ ಆದಾಯವು 'ಜಾಗೃತಿ ಪ್ರತಿಷ್ಠಾನ'ಕ್ಕೆ ಹೋಗಲಿದೆ. ಈ ಮೂಲಕ ರಾಹುಲ್ ತಮ್ಮ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇತ್ತೀಚೆಗೆ 28ನೇ ವರ್ಷಕ್ಕೆ ಕಾಲಿಟ್ಟ ರಾಹುಲ್, ಇದು ನನಗೆ ವಿಶೇಷ ದಿನವಾದ್ದರಿಂದ ನಾನು ಮತ್ತು ಗಲ್ಲಿ ತುಂಬಾ ಸಿಹಿ ಮತ್ತು ವಿಶೇಷವಾದದ್ದನ್ನು ನಿರ್ಧರಿಸಿದ್ದೇವೆ. ನನ್ನ ಕ್ರಿಕೆಟ್ ಪ್ಯಾಡ್, ನನ್ನ ಗವಸು, ಹೆಲ್ಮೆಟ್ ಮತ್ತು ನನ್ನ ಕೆಲವು ಜರ್ಸಿಗಳನ್ನು ನಮ್ಮ ಸಹಭಾಗಿತ್ವದ ಪಾಲುದಾರ ಭಾರತ್ ಸೈನ್ಯಕ್ಕೆ ದಾನ ಮಾಡಲು ನಿರ್ಧರಿಸಿದ್ದೇನೆ. ಅವರು ಇವುಗಳನ್ನು ಹರಾಜು ಮಾಡಲಿದ್ದು, ಬಂದ ಹಣವನ್ನು ಜಾಗೃತಿ ಪ್ರತಿಷ್ಠಾನಕ್ಕೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಮಕ್ಕಳಿಗಾಗಿ ಸಹಾಯ ಮಾಡುವ ಒಂದು ಬುನಾದಿಯಾಗಿದೆ. ಇದು ತುಂಬಾ ವಿಶೇಷವಾಗಿದೆ ಮತ್ತು ಇದನ್ನು ಮಾಡಲು ನನಗೆ ಉತ್ತಮ ದಿನವನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಈ ಹಿಂದೆ ರಾಹುಲ್, ಅನೇಕ ಪ್ರಾಣಿ ಕಲ್ಯಾಣ ಸಂಘಟನೆಗಳಿಗೆ ದಾನ ಮಾಡಿದ್ದಾರೆ. ಕಳೆದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ನೆರವಾಗಿದ್ದರು. ಇದೀಗ ಆ ಮಗು ಸಂಪೂರ್ಣ ಚೇತರಿಸಿಕೊಂಡಿದೆ.