ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೆ ರಾಹುಲ್ ಗಾಂಧಿ....?

ನವದೆಹಲಿ,  ಅ 24:    ರಾಹುಲ್ ಗಾಂಧಿ ಮತ್ತೆ    ಎಐಸಿಸಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್ ಅಂತ್ಯದ ವೇಳೆಗೆ   ಪಕ್ಷದ  ಚುಕ್ಕಾಣಿ ವಹಿಸಿಕೊಳ್ಳುವ ಲಕ್ಷಗಳು ದಟ್ಟವಾಗಿವೆ ಎಂದು  ಪಕ್ಷದ  ಉನ್ನತ ಮೂಲಗಳು  ಹೇಳಿವೆ. 

ದೇಶಾದ್ಯಂತ   ಕಾಂಗ್ರೆಸ್  ಪಕ್ಷದ  ವಿವಿಧ   ನಾಯಕರು,  ಮುಖಂಡರು, ಕಾರ್ಯಕರ್ತರ   ತೀವ್ರ  ಒತ್ತಡ  ಬಂದಿರುವ  ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್  ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಪ್ರಿಯಾಂಕಾ ಗಾಂಧಿ ಅವರನ್ನು  ಪಕ್ಷದ ಮುಖ್ಯಸ್ಥರನ್ನಾಗಿಸಬೇಕು   ಎಂದು  ಪಕ್ಷದ  ಅನೇಕ ಹಿರಿಯ ನಾಯಕರು  ಬಯಕೆಯಾಗಿದ್ದರೂ, ಸೋನಿಯಾ ಗಾಂಧಿ  ಈ ವಿಷಯದಲ್ಲಿ  ಒಲವು ಹೊಂದಿಲ್ಲ  ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಪ್ರದೇಶ ಬಹಳ ಪ್ರಮುಖ ರಾಜ್ಯವಾಗಿದ್ದು, ಪ್ರಿಯಾಂಕ   ಕೇವಲ ಆ ರಾಜ್ಯದತ್ತ   ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. 

ಪ್ರಸ್ತುತ  ತಾವು   ಪಕ್ಷದ ಹಂಗಾಮಿ   ಅಧ್ಯಕ್ಷರಾಗಿದ್ದರೂ ಅನಾರೋಗ್ಯದ ಕಾರಣ  ಪಕ್ಷದ  ಚಟುವಟಿಕೆಗಳಲ್ಲಿ   ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಕಾರಣ  ರಾಹುಲ್  ಗಾಂಧಿ ಪೂರ್ಣಕಾಲಿಕ  ಅಧ್ಯಕ್ಷ ಸ್ಥಾನ ವಹಿಸಬೇಕೆಂದು ಸೋನಿಯಾ ಬಯಸಿದ್ದಾರೆ  ಎಂದು ಪಕ್ಷದ ಈ ಮೂಲಗಳು ಹೇಳಿವೆ. 

ಈ ವರ್ಷದ ಅಂತ್ಯದ ವೇಳೆಗೆ    ಪಕ್ಷದ  ಹೊಸ ಅಧ್ಯಕ್ಷರ  ಚುನಾವಣೆ  ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಜಸ್ಥಾನದ ಉದಯಪುರದಲ್ಲಿ  ಡಿಸೆಂಬರ್ನಲ್ಲಿ  ಏಐಸಿಸಿ ಸಮಾವೇಶ   ನಡೆಯುವ  ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.