ನಟ ಇರ್ಫಾನ್ ನಿಧನಕ್ಕೆ ರಾಹುಲ್, ಜಾವಡೇಕರ್ ಕಂಬನಿ

ನವದೆಹಲಿ, ಎಪ್ರಿಲ್ 29,ಬಾಲಿವುಡ್ ನಟ ಇರ್ಫಾನ್ ಖಾನ್  ನಿಧನಕ್ಕೆ  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಅನೇಕ  ಗಣ್ಯರು  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಪ್ರತಿಭಾವಂತ ನಟರಾಗಿದ್ದ  ಅವರು  ಜಾಗತಿಕ ಚಲನಚಿತ್ರ ಮತ್ತು ಟಿವಿ ವೇದಿಕೆಯಲ್ಲಿ ಭಾರತೀಯ ಜನಪ್ರಿಯ ಬ್ರಾಂಡ್ ರಾಯಭಾರಿಯಾಗಿಯೂ ಕೆಲಸ ಮಾಡಿದ್ದರು ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳಿಗೆ,  ಕುಟುಂಬದ ಸದಸ್ಯರಿಗೆ ನೀಡಲಿ ಎಂದೂ  ಸಂದೇಶದಲ್ಲಿ  ಹೇಳಿದ್ದಾರೆ. ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದ  ನಟ ಇರ್ಫಾನ್ ಖಾನ್ ಮಂಗಳವಾರ  54 ನೇ ವಯಸ್ಸಿನಲ್ಲಿ ನಿಧನರಾದರು, ಅವರ  ನಿಧನಕ್ಕೆ ಕೇಂದ್ರ  ವಾರ್ತಾ ಮತ್ತು ಪ್ರಸಾರ ಸಚಿವೆ ಪ್ರಕಾಶ್ ಜಾವಡೇಕರ್ ಮತ್ತು ದೆಹಲಿ ಮುಖ್ಯಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ    ಗಣ್ಯರು ಕಂಬನಿ  ಮಿಡಿದಿದ್ದಾರೆ.