ಲೋಕದರ್ಶನವರದಿ
ಬೈಲಹೊಂಗಲ: ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮೇಲೆ ನ್ಯಾಯಾಲಯದ ಆವರಣದಲ್ಲಿ ಹಲ್ಲೆ ಮಾಡಿರುವ ವ್ಯಕ್ತಿ ಹಾಗೂ ಆತನ ಸಹಚರರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ಉಪವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಭಾಗ ಮಾತನಾಡಿ, 2015 ರಲ್ಲಿ ಮಹಮ್ಮದ್ ಪೈಗಂಬರ ಅವರ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮಕ್ಕೆ ವರದಿ ಮಾಡಲು ತೆರಳಿದ ಮಾಧ್ಯಮದ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿ, ಅವರ ಕ್ಯಾಮೆರಾವನ್ನು ಕಿತ್ತುಕೊಂಡು ಮಾಧ್ಯಮದ ಹಕ್ಕು ಚುತಿಗೊಳಿಸಿ ರಫಿಕ ಸವದತ್ತಿ ಹಾಗೂ ಆತನ ಸಹಚರರು ಸಮಸ್ತ ಪತ್ರಿಕಾ ಬಳಗಕ್ಕೆ ಅವಮಾನಿಸಿದ್ದರು.
ಸದರಿ ಘಟಣೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕವಾಗಿ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಪ್ರಕರಣಗಳು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
ಸೆ.30ರಂದು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಲಹೊಂಗಲದ ನ್ಯಾಯಾಲಯಕ್ಕೆ ಹಲವಾರು ಸಮಾಜಮುಖಿ ಕಾರ್ಯಕರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಅನಾಥ, ನಿರ್ಗತಿಕರಿಗೆ ಪುನರವಸತಿ ಕಲ್ಪಿಸಿದ ರಫೀಕ ಬಡೇಘರ ಹಾಜರಾದ ಸಂದರ್ಭದಲ್ಲಿ ರಫೀಕ ಸವದತ್ತಿ ಹಾಗೂ ಆತನ ಸಹಚರರು ಪ್ರಕರಣದ ಅಜರ್ಿಯನ್ನು ಹಿಂಪಡೆಯುವಂತೆ ಅವರ ಮೇಲೆ ನ್ಯಾಯಾಲಯದ ಆವರಣಲ್ಲಿ ಹಲ್ಲೆ ನಡೆಸಿರುವ ಘಟಣೆಯನ್ನು ನಾವುಗಳು ತೀವ್ರವಾಗಿ ಖಂಡಿಸುತ್ತೇವೆ. ರಫೀಕ ಬಡೇಘರ ಇವರಿಗೆ ಸೂಕ್ತ ರಕ್ಷಣೆ ನೀಡುವದಾಗಬೇಕೆಂದರು.
ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಜಯ ಕನರ್ಾಟಕ ಸಂಘಟನೆಯ ತಾಲೂಕಾಧ್ಯಕ್ಷ ವಿಠ್ಠಲ ಹಂಪಿಹೊಳಿ ಮಾತನಾಡಿ, ಘಟಣೆಯು ನ್ಯಾಯಾಲಯದ ಆವರಣಲ್ಲಿ ನಡೆದಿರುವದು ನ್ಯಾಯಾಂಗ ನಿಂದನೆಯಾಗುತ್ತದೆ.
ಅಲ್ಲದೆ ನ್ಯಾಯಾಲಯದ ಕೂದಲಳೆಯ ಅಂತರದಲ್ಲಿ ಪೊಲೀಸ ಉಪಾಧೀಕ್ಷರ ಕಾಯರ್ಾಲಯ, ತಾಲೂಕಾ ದಂಡಾಧಿಕಾರಿಗಳ ಕಾಯರ್ಾಲಯ ಹಾಗೂ ಉಪವಿಭಾಗಾಧಿಕಾರಿಗಳ ಕಾಯರ್ಾಲಯಗಳು ಮತ್ತು ತಾಲೂಕಾ ಮಟ್ಟದ ವಿವಿದ ಇಲಾಖೆಗಳು ಇರುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಆರೋಪಿತನಾದ ರಫೀಕ ಸವದತ್ತಿ ಹಾಗೂ ಆತನ ಸಹಚರರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡ ರಾಜು ಬೋಳಣ್ಣವರ, ದಲಿತ ರಕ್ಷಣಾ ವೇದಿಕೆ ಮುಖಂಡರಾದ ಗಣೇಶ ಕಾಂಬಳೆ, ರಾಮು ಕಳಂಕರ, ಸಿದ್ಧಲಿಂಗ ಸೋಲಬನ್ನವರ, ಶ್ರೀನಿವಾಸ ತಲ್ಲೂರ, ಅಬ್ದುಲ್ಲತೀಪ್ ತೋಲಗಿ, ಅಲ್ತಾಪ ನೇಸರಗಿ, ಸುಭಾನಿ ಸಯ್ಯದ, ಇಸ್ಮಾಯಿಲ್ ಬಡೇಘರ, ಆಶೀಫ ಗೋವೆ, ಜಾಫರ ಕೌಜಲಗಿ, ಮೆಹತಾಬ ಖುದ್ದುನ್ನವರ, ಫಾರೂಕ ಮುಲ್ಲಾ, ಮಹ್ಮದಲಿ ಬಾಗೇವಾಡಿ, ಮಡಿವಾಳ ಜಳ್ಳಿ ಹಾಗೂ ಕನರ್ಾಟಕ ರಕ್ಷಣಾ ವೇದಿಕೆ, ಜಯ ಕನರ್ಾಟಕ, ಅಂಬೇಡ್ಕರ ಯುವ ಸೇನೆ ಸಂಘ, ದಲಿತ ರಕ್ಷಣಾ ವೇದಿಕೆ, ಪುಟಪಾತ ವ್ಯಾಪಾರಿಗಳ ಸಂಘ, ಉತ್ತರ ಕನರ್ಾಟಕ ಆಟೋ ಚಾಲಕರ ಸಂಘದ ಸದಸ್ಯರು ಇದ್ದರು.