ಬೆಂಗಳೂರು, ಆ 12 ರಂಗಿತರಂಗ ಚಿತ್ರದ ಖ್ಯಾತಿಯ ರಾಧಿಕಾ ಚೇತನ್ ಹೆಸರು ಬದಲಿಸಿಕೊಂಡಿದ್ದು, ರಾಧಿಕಾ ನಾರಾಯಣ್ ಆಗಿದ್ದಾರೆ 'ಆಧ್ಯಾತ್ಮಿಕ ಸಿಂಚನದೊಂದಿಗೆ ಜೋಡಿಸಿಕೊಳ್ಳುವ ಉದ್ದೇಶದಿಂದ ನಾಮ ಬದಲಾವಣೆಯಾಗಿದೆ' ಎಂದು ಮುಂದಿನ ನಿಲ್ದಾಣ ಚಿತ್ರದ ಪೋಸ್ಟರ್ ಅನಾವರಣದ ಸಂದರ್ಭದಲ್ಲಿ ತಿಳಿಸಿದರು
ಹಿಂದಿನ ನಿಲ್ದಾಣದಿಂದ ಮುಂದಿನ ನಿಲ್ದಾಣಕ್ಕೆ ಕಾಲಿಟ್ಟಿರುವೆ ವಿನಯ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕಾಗಿ 5 ಕೆಜಿ ತೂಕ ಇಳಿಸಿದ್ದೇನೆ ಇದಕ್ಕಾಗಿ ಪ್ರತಿನಿತ್ಯ ಸೆಟ್ ನಲ್ಲಿ ಸೂರ್ಯ ನಮಸ್ಕಾರ ಹಾಕುತ್ತಿದ್ದೆ ಎಂದರು
ಸ್ವತಂತ್ರವಾಗಿ ಬದುಕ ಬಯಸುವ ಯುವತಿ, ತನ್ನನ್ನು ಅರ್ಥಮಾಡಿಕೊಳ್ಳುವ ಆತ್ಮಸಂಗಾತಿ ಸಿಕ್ಕರೆ ಮದುವೆಯಾಗುತ್ತೇನೆ ಎನ್ನುವ ಮೀರಾ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ನಾಯಕನೊಂದಿಗೆ ಈಕೆಗೆ ಪ್ರೀತಿ, ಪ್ರೇಮವಾಗುವುದೇ, ಮುಂದಿನ ನಿಲ್ದಾಣಕ್ಕೆ ಜಂಟಿಯಾಗಿ ಕಾಲಿಡುವರೇ ಎಂಬೆಲ್ಲ ಪ್ರಶ್ನೆಗಳಿಗೆ ಚಿತ್ರ ನೋಡಿಯೇ ಉತ್ತರ ಕಂಡುಕೊಳ್ಳಬೇಕು ಎಂದರು
ಮತ್ತೋರ್ವ ನಾಯಕಿ ಅಹನಾ ಕಶ್ಯಪ್ ಪಾತ್ರದಲ್ಲಿ ಹೊಸ ನಟಿ ಅನನ್ಯ ಅಭಿನಯಿಸಿದ್ದಾರೆ 13 ವರ್ಷ ಮಂಡ್ಯ ರಮೇಶ್ ಅವರ ನಟನಾದಲ್ಲಿ ತರಬೇತಿ ಪಡೆದು, ಹಲವು ರಂಗ ನಾಟಕಗಳಲ್ಲಿ ನಟಿಸಿ ಅನುಭವ ಪಡೆದಿರುವ ಈಕೆ, ನೀರ್ ದೋಸೆ, ಸಿದ್ಲಿಂಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ