ನವದೆಹಲಿ, ಅ. 16: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಪ್ರಚಾರಕ್ ಗಳ ಸಮಾವೇಶ ಇದೇ ತಿಂಗಳ 31ರಿಂದ ನವೆಂಬರ್ 4 ರವರೆಗೆ ಹರಿದ್ವಾರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಐದು ವರ್ಷಗಳಿಗೊಮ್ಮೆ ನಡೆಯಲಿರುವ ಆರ್ಎಸ್ಎಸ್ ಪ್ರಚಾರಕ್ ಗಳ ಸಮಾವೇಶದಲ್ಲಿ ಮೋಹನ್ ಭಾಗವತ್ ಅವರೊಂದಿಗೆ ಸಂಘಟನೆಯ ಹಿರಿಯರಾದ ಭೈಯಾಜಿ ಜೋಶಿ, ದತ್ತಾತ್ರೇಯ ಹೊಸಬಾಳೆ ಮತ್ತು ಕೃಷ್ಣ ಗೋಪಾಲ್ ಭಾಗವಹಿಸಲಿದ್ದಾರೆ.
ಆರ್ಎಸ್ಎಸ್ ಪ್ರಚಾರಕ್ ಸಮಾವೇಶದಲ್ಲಿ ಮಾಧ್ಯಮಗಳಿಗಾಗಿ ವಿಶೇಷ ವಿಚಾರ ಸಂಕಿರಣ ಆಯೋಜಿಸಲು ಸಂಘ ನಿರ್ಧರಿಸಿದೆ. ಆರ್ಎಸ್ಎಸ್ ಪ್ರಚಾರಕ್ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಹರಿದ್ವಾರ ನಗರದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಆರ್ಎಸ್ಎಸ್ ಪ್ರಚಾರಕ್ ಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.