ಡೆಮ್, ಫೆ 14: ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಜತೆಗಾರ್ತಿ ಡೆನಿಸ್ ಶಪೊಲೊವ್ ಜೋಡಿಯು ಇಲ್ಲಿ ನಡೆಯುತ್ತಿರುವ ರೋಟರ್ಡೆಮ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶ ಮಾಡಿದೆ.ಗುರುವಾರ ತಡರಾತ್ರಿ ನಡೆದ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಬೋಪಣ್ಣ-ಶಪೊಲೊವ್ ಜೋಡಿ 6-2, 3-6, 10-7 ಅಂತರದಲ್ಲಿ ನಾಲ್ಕನೇ ಶ್ರೇಯಾಂಕದ ಹಾಗೂ 2015ರ ಚಾಂಪಿಯನ್ ಜೀನ್ ಜುಲಿಯನ್ ಹಾಗೂ ಹಾರಿಯಾ ಟೆಸೂ ಜೋಡಿಯ ವಿರುದ್ಧ ರೋಚಕ ಜಯ ಸಾಧಿಸಿತು. ಒಟ್ಟಾರೆ 74 ನಿಮಿಷಗಳ ಕಾಲ ನಡೆದ ಪ್ರದರ್ಶನದಲ್ಲಿ ಇಂಡೋ-ಕೆನಡಿಯನ್ ಜೋಡಿ ಎಟಿಪಿ 500 ಟೂರ್ನಿಯ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿತು.ಬೋಪಣ್ಣ ಹಾಗೂ ಶಪೊವಲೊವ್ ಜೋಡಿ ಕಳೆದ ವರ್ಷ ಮಾರ್ಕಡ್ಸ್ಕಪ್ ಟೂರ್ನಿಯಲ್ಲಿ ಮೊದಲ ಎಟಿಪಿ ಟೂರ್ ಫೈನಲ್ ತಲುಪಿತ್ತು. ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಹೆನ್ರಿ ಕೊಂಟಿನೆನ್ ಮತ್ತು ಜನ್ ಲೆನಾರ್ಡ್ ಸ್ಟ್ರಫ್ ಹಾಗೂ ಜಾಮಿ ಮರ್ರೆ ಮತ್ತು ಕೆನ್ ಅವರಲ್ಲಿ ಗೆದ್ದ ಜೋಡಿಯ ವಿರುದ್ಧ ಇಂಡೋ-ಕೆನಡಿಯನ್ ಜೋಡಿಯ ವಿರುದ್ಧ ಸೆಣಸಲಿದೆ.