ಮುಂಬೈ, ಅ 15: ಅಕ್ರಮ ಹಣಕಾಸು ವಹಿವಾಟು ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿ. (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಲ್ಪ ಪ್ರಮಾಣದಲ್ಲಿ ನಿರ್ಬಂಧ ಸಡಲಿಸಿದೆ.
ಆರ್ಬಿ.ಐ ಈ ಕುರಿತು ಪ್ರಕಟಣೆ ನೀಡಿದ್ದು, ಪಿಎಂಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಯಿಂದ 40 ಸಾವಿರ ರೂಪಾಯಿವರೆಗೂ ಹಣ ಹಿಂತೆಗೆಯಬಹುದು ಎಂದು ಆರ್ಬಿಐ ತಿಳಿಸಿದೆ.
ಈ ಮೊದಲು 25 ಸಾವಿರ ರೂಪಾಯಿ ಹಿಂಪಡೆಯಲು ಮಾತ್ರ ಅನುಮತಿ ಇತ್ತು. ಕಳೆದ ತಿಂಗಳು ಈ ಬ್ಯಾಂಕ್ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದ ನಂತರ ಆರ್ಬಿಐ ವಿತ್ ಡ್ರಾ ಮಿತಿಯನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಿದೆ.
ಬ್ಯಾಂಕಿನ ಹಣಕಾಸು ಪರಿಸ್ಥಿತಿಯನ್ನು ಮತ್ತು ತನ್ನ ಠೇವಣಿದಾರರಿಗೆ ಹಣ ಪಾವತಿ ಮಾಡುವ ಸಾಮಥ್ರ್ಯವನ್ನು ಪರಿಶೀಲಿಸಿದ ನಂತರ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಿದೆ.