ಮುಂಬೈ 07: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರದಲ್ಲಿ ಶೇ 0.25ರಷ್ಟು (25 bps) ಕಡಿತಗೊಳಿದೆ.
2020ರ ನಂತರ ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್ ಬಿಐ ರೆಪೊ ದರ ಕಡಿತ ಮಾಡಿದೆ. ಕಳೆದ ಎರಡು ವರ್ಷಗಳ ಕಾಲ ರೆಪೊ ದರವನ್ನು ಸ್ಥಿರವಾಗಿ ಕಾಯ್ದಿರಿಸಲಾಗಿತ್ತು. ಆರ್ ಬಿಐ ರೆಪೊ ದರವನ್ನು ಕಡಿತಗೊಳಿಸಿದ್ದು 2020ರ ಮೇ ತಿಂಗಳಲ್ಲಿ.
ರೆಪೊ ದರವು ಇಲ್ಲಿಯವರೆಗೆ ಶೇಕಡಾ 6.5 ರಷ್ಟಿತ್ತು. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶದ ಆರ್ಥಿಕತೆಯು ಕನಿಷ್ಠ ಮಟ್ಟಕ್ಕೆ ಇಳಿದ ನಂತರ ಬಳಕೆಯನ್ನು ಹೆಚ್ಚಿಸಲು ಮಧ್ಯಮ ವರ್ಗಕ್ಕೆ ಇದುವರೆಗಿನ ಅತಿದೊಡ್ಡ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಅಂದರೆ 2025-26 ರ ಬಜೆಟ್‌ನಲ್ಲಿ ಘೋಷಿಸಿದ ವಾರದಲ್ಲಿ ಆರ್ ಬಿಐ ಈ ಕ್ರಮ ಕೈಗೊಂಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಮಿತಿಯ ಸಭೆಯ ನಂತರ ಮಾಹಿತಿ ನೀಡಿದ ಗವರ್ನರ್ ಸಂಜಯ್ ಮಲ್ಹೋತ್ರಾ ಈ ವಿಷಯ ತಿಳಿಸಿದ್ದಾರೆ.
ಇದರ ಪರಿಣಾಮವಾಗಿ ರೆಪೊ ದರ ಶೇ 6.25ರಷ್ಟಾಗಿದೆ.ರೆಪೊ ದರದಲ್ಲಿ ಇಳಿಕೆ ಮಾಡಿದೆ.
ಚಿಲ್ಲರೆ ಹಣದುಬ್ಬರವು ತಾಳಿಕೆ ಮಟ್ಟವಾದ ಶೇ 6ರೊಳಗೆ ಇದೆ. ಹೀಗಾಗಿ ಆರ್‌ಬಿಐ ದರ ಕಡಿತದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದೇ ಅಂದಾಜಿಸಲಾಗಿತ್ತು. 2023ರ ಫೆಬ್ರುವರಿಯಿಂದ ರೆಪೊ ದರ ಶೇ 6.5 ಇತ್ತು.