ಸುಧಾಕರ್ ಬಳಿ ರಮೇಶ್ ಕುಮಾರ್ ಕ್ಷಮೆಯಾಚಿಸಬೇಕು: ರೇಣುಕಾಚಾರ್ಯ

ಬೆಂಗಳೂರು,ಮಾ 11,ಕಾಂಗ್ರೆಸ್ ಶಾಸಕ ಕೆ. ರಮೇಶ್ ಕುಮಾರ್  ಸತ್ಯಹರಿಶ್ಚಂದ್ರರೇನಲ್ಲ. ಅವರು ತಮ್ಮ ರಾಜಕೀಯ ಜೀವನಕ್ಕಾಗಿ ಎಷ್ಟು ಕೊಲೆ ಮಾಡಿಸಿದ್ದಾರೆ  ಎಂಬುದು ತಮಗೆ ಗೊತ್ತಿದ್ದು, ಮುಂದಿನ ದಿನಗಳಲ್ಲಿ ಸಾಕ್ಷಿ ಸಹಿತ ದಾಖಲೆ ಬಿಡುಗಡೆ  ಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ  ಮಾಡಿದ್ದಾರೆ.ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆ  ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರಾಗಿದ್ದಾಗ ಪೀಠದಲ್ಲಿ  ಕುಳಿತು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ. ಸುಧಾಕರ್ ಬಳಿ ರಮೇಶ್ ಕುಮಾರ್ ಕ್ಷಮೆ  ಕೇಳಬೇಕು. ಇಲ್ಲದಿದ್ದರೆ ಅವರನ್ನು ವಿಧಾನಸಭೆಯಿಂದ ಅಮಾನತು ಮಾಡಬೇಕು ಎಂದು  ಆಗ್ರಹಿಸಿದರು.