ಜನತಾ ಬಜಾರ್ ಅಧ್ಯಕ್ಷರಾಗಿ ಕೆ.ಎ. ವೇಮಣ್ಣ, ಉಪಾಧ್ಯಕ್ಷರಾಗಿ ಎಸ್. ಮುಜಾಹಿದ್ ಆಯ್ಕೆ
ಬಳ್ಳಾರಿ 15: ನಗರದಲ್ಲಿ ಜನತಾಬಜಾರನ ನೂತನ ಅಧ್ಯಕ್ಷರಾಗಿ ಕೆ.ಎ. ವೇಮಣ್ಣ (ಕಪ್ಪಗಲ್ಲು ವೇಮಣ್ಣ) ಮತ್ತು ಉಪಾಧ್ಯಕ್ಷರಾಗಿ ಎಸ್. ಮುಜಾಹಿದ್ ಅಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚುನಾವಣಾ ಅಧಿಕಾರಿ ಜೆ.ಎಂ. ನಾಗರಾಜ್ ಅವರು ಮಾಹಿತಿ ನೀಡಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದು, ಎರೆಡೂ ನಾಮಪತ್ರಗಳು ಪರಸ್ಕೃತಗೊಂಡಿವೆ.
ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.ಅಧ್ಯಕ್ಷರಾಗಿದ್ದ ಜಿ. ನೀಲಕಂಠಪ್ಪ ಮತ್ತು ಉಪಾಧ್ಯಕ್ಷರಾಗಿದ್ದ ನಸೀಮಾಬೇಗಂ ಅವರು ರಾಜೀನಾಮೆ ನೀಡಿದ ಕಾರಣ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಭಾನುವಾರ ನಡೆಯಿತು.ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಎ. ವೇಮಣ್ಣ ಅವರು, ಜನತಾ ಬಜಾರನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಎಲ್ಲರೂ ಸಹಕಾರ ನೀಡಿದ್ದು, ಎಲ್ಲರಿಗೂ ಕೃತಜ್ಞತೆಗಳು.
ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲಾ ನಿರ್ದೇಶಕರ ಸಹಕಾರದಲ್ಲಿ ಆಡಳಿತ ನಡೆಸುವೆ ಎಂದರು.ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್. ಮುಜಾಹಿದ್ ಅಲಿಅವರು, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.ಮಾಜಿ ಅಧ್ಯಕ್ಷ ಜಿ. ನೀಲಕಂಠಪ್ಪ, ಮಾಜಿ ಉಪಾಧ್ಯಕ್ಷೆ ನಸೀಮಾಬೇಗಂ, ಹಿರಿಯ ನಿರ್ದೇಶಕರಾದ ಶ್ರೀನಿವಾಸ ಮೋತ್ಕರ್, ಜಿ. ವೀರಶೇಖರ ರೆಡ್ಡಿ, ಹಲಕುಂದಿ ವಿಜಯಕುಮಾರ್, ವೆಂಕಟೇಶ್ ಹೆಗಡೆ, ಪಿ. ದಾನರೆಡ್ಡಿ, ಕೆ. ಭರಮರೆಡ್ಡಿ, ಶ್ರೀಮತಿ ಪಲ್ಲೇದ ಮೈತ್ರಿ, ಶ್ರೀಮತಿ ಎಂ. ಕಾತ್ಯಾಯಿನಿ ಮರಿದೇವಯ್ಯ, ಕೊಳಗಲ್ಲು ಸಿ. ಪ್ರಸಾದ ರೆಡ್ಡಿ, ವಿ. ಪ್ರದೀಪರೆಡ್ಡಿ, ಕೆ.ಎಂ. ಕೇದಾರನಾಥ, ಕೋರಿ ಚನ್ನಬಸಪ್ಪ, ಎಂ. ನರೇಶ್ ಕುಮಾರ್, ಕೆ. ವೆಂಕಟಸ್ವಾಮಿ, ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಗ್ಯಾನಪ್ಪ , ಮುಖಂಡರಾದ ಬಿ. ಮಾರೆಪ್ಪ, ಎಸ್. ಮಲ್ಲನಗೌಡ, ಕೆ.ಎಸ್. ದಿವಾಕರ ಮತ್ತು ಕೆ.ಎಸ್. ಅಶೋಕ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.