ಫಲ-ಪುಷ್ಪ ಪ್ರದರ್ಶನಕ್ಕೆ ಆರ್. ಶಂಕರ್ ಅವರಿಂದ ಚಾಲನೆ

ಕೊಪ್ಪಳ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಪ್ಪಳ ತೋಟಕಾರಿಕೆ ಇಲಾಖೆ ಹಾಗೂ ಸುವರ್ಣ ಕನರ್ಾಟಕ ಉದ್ಯಾನವನಗಳ ಪ್ರತಿಷ್ಠಾಪನ ಪಂಪಾವನ ಮುನಿರಾಬಾದ್ ಇವರ ಸಹಯೋಗದಲ್ಲಿ ಮುನಿರಾಬಾದ್ ಗ್ರಾಮದ ಪಂಪಾವನದಲ್ಲಿ ಆಯೋಜಿಸಲಾದ "ಫಲ-ಪುಷ್ಪ ಪ್ರದರ್ಶನ" ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಚಾಲನೆ ನೀಡಿದರು.  ಈ ಫಲ-ಪುಷ್ಪ ಪ್ರದರ್ಶನವು ಕಣ್ಮನ ಸೆಳೆಯುವಂತಿದೆ.

ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಸದಸ್ಯೆ ಬೀನಾಗೌಸ್, ಮುನಿರಾಬಾದ್ ಡ್ಯಾಂ ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮ, ತೋಟಗಾರಿಕೆ ಇಲಾಖೆ ಉಪನಿದರ್ೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಜನರನ್ನು ಆಕಷರ್ಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಕಾರಿಕೆ ಇಲಾಖೆಯು ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ.  ಈ ಪ್ರದರ್ಶನವು ತಾಲೂಕಿನ ಮುನಿರಾಬಾದ ಗ್ರಾಮದ ಪಂಪಾವನ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ.  ಇಂದಿನಿಂದ ನ. 04 ರವರೆಗೆ ನಾಲ್ಕು ದಿನಗಳ  ಫಲ-ಪುಷ್ಪ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಆಕರ್ಷಕರವಾಗಿ ಶೃಂಗಾರಗೊಂಡಿದೆ.  ಗೇಟ್ಗಳನ್ನು ಹೊಂದಿದ ಸೇವಂತಿಗೆ, ಚೆಂಡು ಹೂ, ಬ್ಲೂ ಡೈಸಿ, ಮತ್ತು ಇತ್ಯಾದಿ ಹೂ ಗಳಿಂದ ಪುಷ್ಪಾಲಂಕೃತವಾದ ತುಂಗಭದ್ರಾ ಆಣೆಕಟ್ಟನ್ನು ನಿಮರ್ಾಣ ಮಾಡಲಾಗಿದೆ.  ವಿವಿಧ ಬಗೆಯ ವಾಷರ್ಿಕ ಹೂಗಳ ಪ್ರದರ್ಶನ, ಚೆಂಡು ಹೂ, ಪೆಟೊನಿಯಾ, ಸಾಲ್ವಿಯಾ, ಕ್ಯಾಲೆಂಡುಲಾ, ಸೆಲೋಷಿಯಾ, ಪ್ಲಾಕ್ಸ್, ಜಿನಿಯಾ, ವಿಂಕಾ, ಆಸ್ಟರ್, ಪ್ಯಾನ್ಸಿ, ಬಿಗೋನಿಯಾ, ಡಯಾಂಥಸ್, ಗಜೇನಿಯಾ, ಟೊರೇನಿಯಾ, ಪಬರ್ಿನಾ, ಜಿರೇನಿಯಂ, ಇತ್ಯಾದಿ.  ಕನ್ನಡ ಸಾಹಿತ್ಯದ ಹಿರಿಮೆಯನ್ನು ಸಾರುವ ಪುಷ್ಪಾಲಂಕೃತ ಸ್ತಬ್ದ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ.  ಕನ್ನಡ ರತ್ನತ್ರಯರಾದ ಪಂಪ, ರನ್ನ, ಜನ್ನ, ಕನ್ನಡದ ದಾಸಶ್ರೇಷ್ಟರಾದ ಪುರಂದರದಾಸರು, ಕನಕದಾಸರು, ವ್ಯಾಸರಾಯರು, ಕನ್ನಡದ ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕನ್ನಡದ ಪ್ರಖ್ಯಾತ ಕವಿ ಶ್ರೇಷ್ಟರಾದ ಕುಮಾರವ್ಯಾಸ, ಲಕ್ಷ್ಮೀಶ, ಹರಿಹರ, ರಾಘವಾಂಕ, ಕನ್ನಡದ ಚಕ್ರವತರ್ಿಗಳಾದ ಕೃಷ್ಣದೇವರಾಯ, ಅಮೋಘವರ್ಷ ನೃಪತುಂಗ, ವಿಕಟಕವಿ ತೆನಾಲಿ ರಾಮಕೃಷ್ಣ, ತ್ರಿಪದಿ ಕವಿ ಸರ್ವಜ್ಞ, ಕನ್ನಡ ಧ್ವಜ, ಭುವನೇಶ್ವರಿ, ಕನರ್ಾಟಕ ನಕ್ಷೆ, ಜ್ಞಾನಪೀಠ ಪುರಸ್ಕೃತ ಕನ್ನಡ ಕವಿಗಳು ಹಾಗೂ ಡಿ.ವಿ.ಗುಂಡಪ್ಪರವರ ಚಿತ್ರಗಳು ಪ್ರೇಕ್ಷಕರಿಗೆ ನೋಡಲು ಲಭ್ಯ ಇವೆ.  ವಾಣಿಜ್ಯ ಪುಷ್ಪಗಳು, ಸಾಂಪ್ರದಾಯಿಕ ಪುಷ್ಪಗಳು, ಗಿರಿ ಪುಷ್ಪಗಳ ಪ್ರದರ್ಶನ, ಜಿಪ್ಸೋಫಲಂ, ಲಿಲ್ಲಿಯಂ, ಸುಗಂಧರಾಜ, ಗ್ಲಾಡಿಯೋಲಸ್, ಅಂಥೋರಿಯಂ, ಸೀತಾಳೆ ಹೂಗಳು, ಜಬರ್ೆರಾ, ಕಾನರ್ೆಶನ್, ಗುಲಾಭಿ, ಸೇವಂತಿಗೆ, ಆಲ್ಸ್ಟ್ರೋಮೇರಿಯಾ, ಬರ್ಡ ಆಫ್ ಪ್ಯಾರಡೈಸ್, ಡೈಸಿ, ಗೋಲ್ಡನ್ ರಾಡ್, ತೋಟಗಾರಿಕೆ ವಿಭಾಗಗಳಾದ, ಹಣ್ಣಿನ ಬೆಳೆಗಳು, ತರಕಾರಿ ಬೆಳೆಗಳು, ಪುಷ್ಪ ಬೆಳೆಗಳು, ಮನೆಯನ್ನು ಶೃಂಗಾರಗೊಳಿಸುವ ಬಣ್ಣ-ಬಣ್ಣದ ಹೂಗಳ ಗಿಡಗಳಿಂದ ಈಡೀ ಪಂಪಾವನವೇ ಶೃಂಗಾರಗೊಂಡಿದೆ.