ಗುಣಮಟ್ಟದ ಕಾಮಗಾರಿಯಾಗಲಿ: ಈಳಗೇರ

ಲೋಕದರ್ಶನ ವರದಿ

ಯಲಬುರ್ಗಾ: ತಾಲೂಕಿನ ಕೆರೆ ಅಭಿವೃದ್ಧಿ ಮಾಡಲು ನಮ್ಮ ಶಾಸಕರಾದ ಹಾಲಪ್ಪ ಆಚಾರವರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ ಅವರ ಕನಸನ್ನು ನನಸು ಮಾಡಲು ನಾವೆಲ್ಲರೂ ಅವರ ಜೊತೆ ಕೈ ಜೋಡಿಸಬೇಕು ಅಂದಾಗ ಕೆರೆಗಳ ಅಭಿವೃದ್ಧಿಯಾಗಿ ರೈತರಿಗೆ ಅನಕೂಲವಾಗಲಿದೆ ಎಂದು ತಾಪಂ ಸದಸ್ಯ ಶರಣಪ್ಪ ಈಳಗೇರ ಹೇಳಿದರು.

                2017-18 ನೇ ಸಾಲೀನ ನರೇಗಾ ಯೋಜನೆಯಡಿಯಲ್ಲಿ ತಾಲೂಕಿನ ಬಸಾಪೂರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

                ಕೆರೆ ಅಭಿವೃದ್ಧಿಗಾಗಿ ರೂ,03 ಲಕ್ಷ ಹಣ ಬಿಡುಗಡೆಯಾಗಿದ್ದು ಹಣ ಸದುಪಯೋಗವಾಗಬೇಕು ಉತ್ತಮ ಹಾಗೂ ಗುಣಮಟ್ಟದ ಕಾಮಗಾರಿಯಾಗಬೇಕು ಕೆರೆಯಲ್ಲಿ ನೀರು ಸಂಗ್ರಹಿಸುವದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೆರೆಯ ಸುತ್ತ ಮುತ್ತ ಇರುವ ರೈತರ ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಬರಗಾಲದಲ್ಲಿಯೂ ಬೆಳೆ ಬೇಳೆಯಲು ಅನುಕೂಲವಾಗುವದು ಇದರಿಂದ ರೈತ ಸಂಕಷ್ಟದಿಂದ ಪಾರಾಗುತ್ತಾನೆ ಆದ್ದರಿಂದ ಇಂತಹ ಯೋಜನೆಗಳನ್ನು ಸದುಪಯೋಗ ಮಾಡಲು ಎಲ್ಲರ ಸಹಕಾರ ಮುಖ್ಯವಾದದು ಎಂದರು,

                ಪಿಡಿಓ ರವಿಕುಮಾರ ಲಿಂಗಣ್ಣನವರು, ಗ್ರಾಪಂ ಸದಸ್ಯರಾದ, ಮಹಮ್ಮದ್ಸಾಬ ತಾಳಿಕೋಟಿ, ಶರಣಪ್ಪಗೌಡ ಪಾಟೀಲ, ಬಸವರಾಜ ಹೋಸಗೌಡರ, ಶೇಖಪ್ಪ ವಣಗೇರಿ, ಎನ್ಆರ್ಇಜಿ ಸಹಾಯಕ ಜಗದೀಶ ಸೇರಿದಂತೆ ಅನೇಕರು ಹಾಜರಿದ್ದರು.