ಲೋಕದರ್ಶನ ವರದಿ
ಬೆಳಗಾವಿ ೦೬: ಕೆಎಲ್ಇ ವಿಶ್ವವಿದ್ಯಾಲಯದ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯ, ಮಾನಸಿಕ ರೋಗ ವಿಭಾಗ ಬೆಳಗಾವಿ ಹಾಗು ಫಿಲಡೆಲ್ಫಿಯಾದ ಥಾಮಸ್ ಜೆಫರರ್ಸನ್ ವಿಶ್ವವಿದ್ಯಾಲಯದ ಶುಶ್ರೂಷಾ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ದಿ. 6ರಂದು ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ಗುಣಾತ್ಮಕ ಸಂಶೋಧನೆ ಸಂದರ್ಶನಕ್ಕಾಗಿ ಸುಧಾರಿತ ಪ್ರಶ್ನೆಗಳು ಮತ್ತು ಸಂದರ್ಶನ ಕಲೆ ಕುರಿತಾದ ಅಂತರಾಷ್ರೀಯ ಕಾಯರ್ಾಗಾರ ನೆರವೇರಿತು.
ಕಾರ್ಯಕ್ರಮದ ಆರಂಭದಲ್ಲಿ ಕಾಹೆರ್ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಡೀನ್ ಮತ್ತು ಪ್ರಾಚಾರ್ಯರಾಗಿರುವ ಡಾ ಸುಧಾ ರಡ್ಡಿ ಸರ್ವರಿಗೆ ಸ್ವಾಗತ ಕೋರಿದರು. ಡಾ.ಪೆಟ್ರéೀಷಿಯಾ ಕೆಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಫಿಲಡೆಲ್ಫಿಯಾದ ಥಾಮಸ್ ಜೆಫರರ್ಸನ್ ವಿಶ್ವವಿದ್ಯಾಲಯದ ಶುಶ್ರೂಷಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಯಾಮಿ ಡಿಸೋಜಾ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು.ಕಾಯರ್ಾಗಾರದಲ್ಲಿ ಸಂದರ್ಶನಕ್ಕಾಗಿ ಸುಧಾರಿತ ರೀತಿಯಲ್ಲಿ ಪ್ರಶ್ನೆಗಳನ್ನು ಸಿದ್ಧಪಡಿಸುವದು ಮತ್ತು ಸಂದರ್ಶನ ಕಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನಾತ್ಮಕವಾಗಿ ಚಚರ್ೆ ಮತ್ತು ಮಾರ್ಗದರ್ಶನ ನೀಡಲಾಯಿತು . ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯ ,ಮಾನಸಿಕ ರೋಗ ವಿಭಾಗದ ಮುಖ್ಯಸ್ಥರಾಗಿರುವ ಡಾ.ಗುರುರಾಜ ಉಡುಪಿ ವಂದನಾರ್ಪಣೆ ಮಾಡಿದರು.ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಅಂತರಾಷ್ರೀಯ ಕಾಯರ್ಾಗಾರದಲ್ಲಿ ಪಾಲ್ಗೊಂಡರು.