ಮಾ-28 ರಿಂದ ಏ-06 ರವರಿಗೆ ಪುರಸಿದ್ಧೇಶ್ವರ ದೇವಸ್ಥಾನ ರಥೋತ್ಸವ ಜರುಗಲಿದೆ

Purasidheshwara Temple Chariot Festival to be held from March 28 to April 6

ಮಾ-28 ರಿಂದ ಏ-06 ರವರಿಗೆ ಪುರಸಿದ್ಧೇಶ್ವರ ದೇವಸ್ಥಾನ  ರಥೋತ್ಸವ ಜರುಗಲಿದೆ  

ಹಾವೇರಿ 26: ಯಾಲ್ಲಕ್ಕಿ ಕಂಪಿನ ಹಾವೇರಿ ನಗರದ ಪುರಸಿದ್ಧೇಶ್ವರ ದೇವಸ್ಥಾನ  ರಥೋತ್ಸವ ಮಾ-28 ರಿಂದ ಏ-06 ರವರಿಗೆ ಜರುಗಲಿದೆ. ದಿ,28 ರಂದು ಶುಕ್ರವಾರ ರಾತ್ರಿ 7 ಘಂಟೆಗೆ  ಪುರಸಿದ್ಧೇಶ್ವರ ಮೂರ್ತಿಗೆ ಕಂಕಣಧಾರಣೆ, ದಿ,29 ಶನಿವಾರ ಪುರಸಿದ್ಧೇಶ್ವರ ಮೂರ್ತಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಗಣಂಗಳ, 8 ಘಂಟೆಗೆ ಪ್ರಸಾದ ದಾಸೋಹ, ದಿ,30 ರವಿವಾರ ಪುರಸಿದ್ಧೇಶ್ವರ ಮೂರ್ತಿಗೆ ರುದ್ರಾಭಿಷೇಕ ನಂತರ ಗುಗ್ಗಳ ಜೊತೆಗೆ ಹೂವಿನ ತೇರು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಪುರಸಿದ್ಧೇಶ್ವರ ದೇವಸ್ಥಾನಕ್ಕೆ ಮುಂಜಾನೆ 11 ಘಂಟೆಗೆ ತಲುಪುವುದು. 12-32 ಕ್ಕೆ ವಿವಿಧ ಮಠಗಳ  ಶ್ರೀಗಳ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಅನ್ನಸಂತರೆ​‍್ಣ ಜರುಗುವುದು. ಸಾಯಂಕಾಲ 6-40 ಗಂಟೆಗೆ ವಿಜೃಂಭಣೆಯಿಂದ ಪುರಸಿದ್ಧೆಶ್ವರ ರಥೋತ್ಸವ ಸಕಲ ವಾಧ್ಯ ವೈಭವಗಳೊಂದಿಗೆ ಹೊರಡುವುದು.ದಿ,31 ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಲ್ಲದ ಬಂಡಿಯು ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಪುರಸಿದ್ಧೇಶ್ವರ ದೇವಸ್ಥಾನದವರಿಗೆ ತಲುಪುವುದು.ದಿ,1 ರಂದು ಮಂಗಳವಾರ ಸಾಯಂಕಾಲ 6-30 ಗಂಟೆಗೆ ವಿವಿಧ ಧಾರ್ಮಿಕ ಕಾಯರ್ಯಕ್ರಮ ಜರುಗುವವು.ದಿ,2 ಬುಧವಾರ ಸಾಯಂಕಾಲ ಧಾರ್ಮಿಕ 6-30 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ದಿ,4 ಮತ್ತು 5 ರಂದು ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಗೆ ಕುಸ್ತಿ ಸ್ಪರ್ಧೆಗಳು ಜರುಗುವವು. ದಿ,6 ರಂದು ಮಧ್ಯಾಹ್ನ 4 ಗಂಟೆಗೆ ಕುಸ್ತಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುರಸಿದ್ಧೇಶ್ವರ ದೇವಸ್ಥಾನ  ರಥೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ದೇವಸ್ಥಾನ ಸಮಿತಿ ಪ್ರಕಟಣೆ ಕೋರಿದೆ.