ಬಲ್ಬೀರ್ ಸಿಂಗ್ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಸಂತಾಪ

ಚಂಡೀಗರ್, ಮೇ 25, ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಂತಾಪ ಸೂಚಿಸಿದ್ದಾರೆ.ಮೂರು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬಲ್ಬೀರ್ ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಈ ಬಗ್ಗೆ ಅಮರೀಂದರ್ ಟ್ವೀಟ್ ಮಾಡಿ, "ಹಾಕಿ ದಂತಕಥೆ ಬಲ್ಬೀರ್ ಸಾವಿನ ಸುದ್ದಿ ತೀವ್ರ ಆಘಾತಕ್ಕೊಳಗಾಗಿದೆ. ಅವರು ಮೂರು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮತ್ತು ನಿಜವಾದ ಕ್ರೀಡಾ ಪ್ರೇಮಿ. ಸರ್, ನಾವು ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ. ನೀವು ನಮಗೆ ಸ್ಫೂರ್ತಿಯಾಗುತ್ತೀರಿ. ರಾಜ್ಯವು ನಿಮಗೆ ಗೌರವ ಸಲ್ಲಿಸುತ್ತದೆ" ಎಂದಿದ್ದಾರೆ. ಬಲ್ಬೀರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ್ ರತ್ನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಬಲ್ಬೀರ್ ಅವರು ಬಹುದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಮೊಹಾಲಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು.