ಪುದುಚೆರಿ, ಮಾರ್ಚ್ 28, ಪುದುಚೆರಿ ವಿಧಾನಸಭಾ ಅಧಿವೇಶನ ಸೋಮವಾರ ನಡೆಯಲಿದೆ.ಮಾರ್ಚ್ 30 ರಂದು ಬೆಳಗ್ಗೆ 9.30 ಕ್ಕೆ ಶಾಸಕರು ಮತ್ತೆ ಸಭೆ ಸೇರುವಂತೆ ಸೂಚಿಸಲಾಗಿದೆ.
ಅಧಿವೇಶನ ಕೇವಲ ಒಂದು ದಿನ ನಡೆಯುವ ನಿರೀಕ್ಷೆ ಇದೆ.ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮುಂದಿನ ಹಣಕಾಸು ವರ್ಷದ ಮೊದಲ ಐದು ತಿಂಗಳ ಸರ್ಕಾರದ ವೆಚ್ಚಕ್ಕೆ ಮತ ಪಡೆಯಲಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಕೋವಿಡ್ 19 ರ ವಿರುದ್ಧ ಹೋರಾಟಕ್ಕೆ ಹೆಚ್ಚು ಅನುದಾನ ನೀಡುವಂತೆ ಕೇಂದ್ರವನ್ನು ಕೋರುವ ನಿರ್ಣಯವೂ ಸಭೆಯಲ್ಲಿ ಅಂಗೀಕಾರವಾಗಲಿದೆ ಎಂದು ಹೇಳಲಾಗಿದೆ.