ಲೋಕದರ್ಶನ ವರದಿ
ಶಿಗ್ಗಾವಿ 29: ಕಾಂಗ್ರೆಸ ಕಾರ್ಯಕರ್ತರು ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿ ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ತೈಲ ಬೆಲೆ ಏರಿಕೆ ಗಗನಕ್ಕೆ ಏರುತ್ತಿದ್ದು ಜನ ಸಾಮಾನ್ಯರ ಜೀವನ ನಿರ್ವಹಣೆಗೆ ತೊಂದರೆ ಆಗುತ್ತಿದ್ದರ ಪರಿಣಾಮ ಅದಷ್ಟು ಬೇಗ ಅದರ ದರವನ್ನು ಕಡಿಮೆ ಮಾಡಬೇಕೆಂದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷ ಬಸವನಗೌಡ ದೇಸಾಯಿ, ಕೆ.ಪಿ.ಸಿ.ಸಿ ತಾಲೂಕಿನ ವೀಕ್ಷಕರಾದ ಸುನೀತಾ ಹುರಕಡ್ಲಿ, ಹಾವೇರಿ ಜಿಲ್ಲಾ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆ ಪ್ರೇಮಾ ಪಾಟೀಲ,ತಾಲೂಕ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್.ವೆಂಕೋಜಿ , ಕಾಯರ್ಾಧ್ಯಕ್ಷ ವಿರೇಶ ಆಜೂರ ಪ್ರಧಾನ ಕಾರ್ಯದಶರ್ಿ ಶ್ರೀಕಾಂತ ಪೂಜಾರ, ಕಾಂಚನಾ ಘಾಟಗೆ, ಪುರಸಭೆ ಸದಸ್ಯೆ ವಸಂತಾ ಭಾಗೂರ, ಮುಸ್ತಾಕ ಮುಲ್ಲಾ, ಶಬ್ಬೀರ ಮಕಾಂನದಾರ, ಮಂಜುನಾಥ ತಿಮ್ಮಾಪೂರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.