ಸಾರ್ವಜನಿಕ ದೂರು ಸಲ್ಲಿಕೆಗೆ ಪೊಲೀಸ್ ಠಾಣೆಗಳಲ್ಲೂ ಅವಕಾಶ -ಅಪರ ಜಿಲ್ಲಾಧಿಕಾರಿ ಯೋಗೇಶ್ವರ

ಹಾವೇರಿ: ಮಾ.18:  ವಿವಿಧ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ  ಆಕ್ಷೇಪಾರ್ಹ ಕಾರ್ಯಕ್ರಮಗಳು ಹಾಗೂ ಗುಣಮಟ್ಟ , ಜಾಹೀರಾತು ಪ್ರಸಾರ  ವಿಷಯಗಳಲ್ಲಿ ಯಾವುದೇದಾದರೂ ಆಕ್ಷೇಪಗಳಿದ್ದರೆ ಸಾರ್ವಜನಿಕರು ದೂರು ಸಲ್ಲಿಸಲು ಮುಂದೆ ಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೇಬಲ್ ಟೆಲವಿಷನ್  ಜಿಲ್ಲಾ ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಹಾಗೂ ಪ್ರಸಾರವಾಗುವ  ಜಾಹೀರಾತಗಳಲ್ಲಿ ಬಳಕೆಮಾಡುವ ದೃಶ್ಯ ಹಾಗೂ ವಿಷಯಗಳ ಬಗ್ಗೆ ವೀಕ್ಷರ ಆಕ್ಷೇಪಣೆಗಳನ್ನು ಸಲ್ಲಿಸಲು ಜಿಲ್ಲಾ ಮಟ್ಟದ ದೂರು ಸ್ವೀಕಾರ ಕೇಂದ್ರದ ಜೊತೆಗೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಯಿತು.

ಕೇಬಲ್ ಟೆಲವಿಷನ್ ನೆಟ್ವಕರ್್ ಅಧಿನಿಯಮ 1995ರ ಅನುಸಾರ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಯಾವುದೇ ಸಿಗ್ನಲ್ಗಳ ದೋಷ, ಕಾರ್ಯಕ್ರಮ ಗುಣಮಟ್ಟದ ಬಗ್ಗೆ ವೀಕ್ಷಕರ ಆಕ್ಷೇಪಗಳು, ಜಾಹೀರಾತುಗಳಲ್ಲಿ ಬಿತ್ತರವಾಗುವ ಸಂದೇಶ, ಪ್ರಸಾರವಾಗುವ ವಿಡಿಯೋ ಹಾಗೂ ಚಿತ್ರಗಳ ಬಗ್ಗೆ ಆಕ್ಷೇಪಗಳಿದ್ದರೆ ಹಾಗೂ  ಸಾರ್ವಜನಿಕರನ್ನು ಪ್ರಚೋದಿಸುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕಾರ್ಯಕ್ರಮಗಳ ಪ್ರಸಾರವಾದರೆ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಕಾರ್ಯಕ್ರಮಗಳ ಪ್ರಸಾರವಾದರೆ, ಮಹಿಳೆಯರು ಮತ್ತು ಮಕ್ಕಳ ಬಗೆಗಿನ ವಿಕೃತವಾದ ಕಾರ್ಯಕ್ರಮಗಳ ಪ್ರಸಾರ,  ಅಶ್ಲೀಲ ಚಿತ್ರಗಳನ್ನು ಸ್ಥಳೀಯ ಕೇಬಲ್ಗಳಲ್ಲಿ ಪ್ರಸಾರ ಮಾಡಿದರೆ ಸಾರ್ವಜನಿಕರು ದೂರು ಸಲ್ಲಿಸಲು ಮನವಿ ಮಾಡಿಕೊಂಡರು.

 ಜಿಲ್ಲಾ ಮಟ್ಟದ ದೂರು ಕೋಶ ಸಹಾಯಕ ನಿರ್ದೇ ಶಕರು, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,   ವಾರ್ತ ಭವನ, ವಿದ್ಯಾನಗರ ಹಾವೇರಿ-581110 ವಿಳಾಸಕ್ಕೆ ಲಿಖಿತವಾಗಿ ಅಥವಾ ಇಮೇಲ್  dipohaveri@gmail.comಮೂಲಕ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08375-233092  ಸಂಪಕರ್ಿಸಬಹುದು  ಅಥವಾ ರಾಜ್ಯ ಮಟ್ಟದದಲ್ಲಿ ಸ್ಥಾಪಿಸಿರುವ ದೂರ ಕೋಶ  ಸಾರ್ವಜನಿಕರು ವಾರ್ತ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿ 080-22028013, ವಾಟ್ಸಾಪ್ ಮೊ.9480841212 ಹಾಗೂ ಇ ಮೇಲ್ complaintsontelevision @gmail.com  ಕ್ಕೆ  ಸಲ್ಲಿಸಬಹುದು ಎಂದು ತಿಳಿಸಿದರು.