ನಿವೃತ್ತ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿ

Provide retirement facility to retired employees in revised pay scale

ಬೆಳಗಾವಿ 16: 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ಜು.1-2022ರಿಂದ ಜು.31-2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ, ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  

ಸರಕಾರ 7ನೇ ವೇತನ ಆಯೋಗ ಜಾರಿ ಮಾಡಿದ ಸಂದರ್ಭದಲ್ಲಿ ನಿವೃತ್ತರಾದ ನಮಗೆ 6ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಸೌಲಭ್ಯ ಒದಗಿಸಿದೆ. ಆದರೆ, ಇದರಿಂದ ನಮಗೆ ಸಾಕಷ್ಟು ಆರ್ಥಿಕ ನಷ್ಠವಾಗಿದೆ. ಹೀಗಾಗಿ ಸರಕಾರ 7ನೇ ವೇತನ ಆಯೋಗದ ಲೆಕ್ಕಾ ಚಾರದಲ್ಲಿ ಡಿ.ಸಿ.ಆರಿ​‍್ಜ, ಕಮ್ಯುಟೇಷನ್, ಗಳಿಕೆ ರಜೆ, ನಗದೀಕರಣ ಮೊತ್ತವನ್ನು ಒದಗಿಸಲು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.  

ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಷಣ್ಮುಖಯ್ಯ,ರಾಜ್ಯ ಸಂಚಾಲಕ ಅಶೋಕ ಸಜ್ಜನ್, ಜಿಲ್ಲಾಧ್ಯಕ್ಷ ಎಸ್ ಜಿ. ಸಿದ್ನಾಳ, ಅರ್ಜುನ ಸೊಂಟಕ್ಕಿ, ಎಂ.ವಿ.ಹಿರೇಮಠ ಸೇರಿದಂತೆ ಇತರರು ಇದ್ದರು.