ಆರೋಗ್ಯ ತಪಾಸಣೆ ಮಾಹಿತಿಗಳನ್ನು ಸಕಾಲದಲ್ಲಿ ನಿಗದಿತ ತಂತ್ರಾಂಶದಲ್ಲಿ ಅಳವಡಿಸಿ: ಜಿಲ್ಲಾಧಿಕಾರಿ

ಹಾವೇರಿ: ಮೇ 15: ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಅನ್ಯ ಮಾರ್ಗದಿಂದ ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಿ ಇಂತಹವರ ಮಾಹಿತಿಯನ್ನು ಪಡೆದು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ಗೆ ಕ್ರಮವಹಿಸಿ ಹಾಗೂ ಮನೆ ಮನೆ ಆರೋಗ್ಯ ತಪಾಸಣೆ, ಜಿಲ್ಲೆಗೆ ಬಂದವರ ಆರೋಗ್ಯ ಮಾಹಿತಿ, ಕಂಟೋನ್ಮೆಂಟ್ ಜೋನ್ಗಳ ದೈನಂದಿನ ಚಟುವಟಿಕೆಗಳನ್ನು ನಿಗಧಿತ ತಂತ್ರಾಂಶದಲ್ಲಿ ಸಕಾಲದಲ್ಲಿ ಅಳವಡಿಸಲು ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.

ತಹಶೀಲ್ದಾರಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು, ಗೃಹ ಪ್ರತ್ಯೇಕತೆಯಲ್ಲಿರುವ ಎಲ್ಲರ ಆರೋಗ್ಯದ ಮಾಹಿತಿಯನ್ನು ಪ್ರತಿನಿತ್ಯ ಪಡೆಯಬೇಕು. ಕ್ವಾರಂಟೈನ್ ವಾಚ್ ತಂತ್ರಾಂಶದಲ್ಲಿ  ನಿತ್ಯದ ಆರೋಗ್ಯದ ಸ್ಥಿತಿಗತಿಯನ್ನು ಅವರ ಸೆಲ್ಫಿ ಪೋಟೋದೊಂದಿಗೆ ಅಪ್ಲೋಡ್ ಮಾಡಬೇಕೆಂದು ಸೂಚನೆ ನೀಡಿದರು.

ಸೇವಾ ಸಿಂಧು ನೊಂದಣಿ ಪಾಸ್ನೊಂದಿಗೆ ಜಿಲ್ಲೆಗೆ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಎಸ್.ಓ.ಪಿ. ಮಾರ್ಗಸೂಚಿಯಂತೆ ಕ್ರಮವಹಿಸಿ. ಬೇರೆ ಮಾರ್ಗದಿಂದ ಜಿಲ್ಲೆಗೆ ಪ್ರವೇಶ ಮಾಡಿದವರ ಮಾಹಿತಿಯನ್ನು ಪಿಡಿಓ.ಗಳ ಮೂಲಕ ಪಡೆಯಬೇಕು. ಇದರಲ್ಲಿ ನಿರ್ಲಕ್ಷ್ಯ ವಹಿಸಿ ಇವರಿಂದ ಕೋವಿಡ್ ಪ್ರಕರಣಗಳು ಪತ್ತೆಯಾದಲ್ಲಿ ನೀವೇ ಜವಾಬ್ದಾರರು. ಗೋವಾ ರಾಜ್ಯದಿಂದ ಬಂದವರನ್ನು ತಪಾಸಣೆ ನಡೆಸಿ. ಈ ಪೈಕಿ ಕೋವಿಡ್ ಲಕ್ಷಣಗಳಿದ್ದರೆ ಕ್ವಾರಂಟೈನ್ಗೆ ಕಳುಹಿಸಬೇಕಾಗುತ್ತದೆ. ಸಾಂಸ್ಥಿಕ ಕ್ವಾರಂಟೈನ್ನಲ್ಲಿ ರುವವರಿಗೆ ಉತ್ತಮ ಊಟ, ಸ್ವಚ್ಛತೆ ಕಾರ್ಯ, ಶುಚಿ ಸಂಭ್ರಮ ಕಿಟ್ಗಳನ್ನು ನೀಡಬೇಕು. ಮಾಸ್ಕ್, ಸ್ಯಾನಿಟೈಸರ್ಗಳನ್ನು ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಖಾಸಗಿ ನಸರ್ಿಂಗ್ ಹೋಂ, ಕ್ಲಿನಿಕ್ ಹಾಗೂ ಆಯುವರ್ೇದಿಕ್ ವೈದ್ಯರ ಬಳಿ ತಪಾಸಣೆಗೆ ಬಂದವರ ಮಾಹಿತಿ ಸಂಗ್ರಹಿಸಬೇಕು. ಈ ಪೈಕಿ ಜ್ವರ, ಕೆಮ್ಮು, ಶೀತ, ನೆಗಡಿ ಲಕ್ಷಣಗಳ ಕುರಿತಂತೆ ಪ್ರತಿನಿತ್ಯ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಮೆಡಿಕಲ್ ಶಾಪ್ಗಳಲ್ಲಿ ಈ ರೋಗ ಲಕ್ಷಣಗಳಿಗೆ ನಿರಂತರ ಮಾತ್ರೆಗಳನ್ನು ಖರೀದಿಸಿದವರ ಮಾಹಿತಿ ಪಡೆದು  ನಿಗಾವಹಿಸುವಂತೆ ಸೂಚಿಸಿದರು ಹಾಗೂ ಕಳೆದ ಎಪ್ರಿಲ್ನಿಂದ ಈವರೆಗೆ  ಜಿಲ್ಲೆಯಲ್ಲಿ ಮರಣ ಹೊಂದಿದವರ ಮಾಹಿತಿ ಹಾಗೂ ಯಾವ ಕಾರಣಕ್ಕೆ ಮರಣ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಕ್ರೋಢಿಕರಿಸಿ ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯ ಘೋಷಿತ ಕಂಟೋನ್ಮೆಂಟ್ ಬಫರ್ ಜೋನ್ ವಲಯಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕು.  ಈ ವಲಯಗಳಲ್ಲಿ ವೈದ್ಯರ ಮೂಲಕ ಮನೆ ಮನೆ ಆರೋಗ್ಯ ತಪಾಸಣೆ ಚಟುವಟಿಕೆಗಳ ಅಂಕಿಅಂಶಗಳನ್ನು ಕಾಲಕಾಲಕ್ಕೆ ಕಂಟೋನ್ಮೆಂಟ್ ಜೋನ್ ಆ್ಯಪ್ ತಂತ್ರಾಂಶದಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಮಾತನಾಡಿ, ಜಿಲ್ಲೆಯಲ್ಲಿ  ಮನೆ ಮನೆ ಆರೋಗ್ಯ ಸವರ್ೇ ಕುರಿತಂತೆ ಮಾಹಿತಿಯನ್ನು ಹೆಲ್ತ್ ವಾಚ್ ತಂತ್ರಾಂಶದಲ್ಲಿ ಅಳವಡಿಸಬೇಕಾಗಿದೆ. ಈ ತಂತ್ರಾಂಶದ ಹೊಸ  ವರ್ಷನ್ ಬಿಡುಗಡೆಗೊಳಿಸಿದ್ದು, ಎಲ್ಲ ಬಿ.ಎಲ್.ಓ.ಗಳು ಅಪ್ಡೆಟ್ ಮಾಡಿಕೊಳ್ಳಲು ನಿದರ್ೆಶನ ನೀಡಿ. ಜಿಲ್ಲೆಯಲ್ಲಿ 1470 ಜನ ಬಿ.ಎಲ್. ಓ.ಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದು, ಈವರೆಗೆ 1225 ಜನ  ಆ್ಯಪ್ಗ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಬಾಕಿ 245 ಜನ ಬಿ.ಎಲ್.ಓ.ಗಳು ಹೆಲ್ತ್ ವಾಚ್ ಆ್ಯಪ್ಗಳನ್ನು ಡೌನ್ಲೋಡಮಾಡಿಕೊಂಡು  ಮಾಹಿತಿಯನ್ನು  ಅಪ್ಲೋಡ್ ಮಾಡಬೇಕಾಗಿದೆ.  ಈವರೆಗೆ 3,18,852 ಮನೆಗಳ ಪೈಕಿ 68,516 ಮನೆಗಳ ಸವರ್ೇ ಮಾಹಿತಿಯನ್ನು ಅಪ್ಮಾಡಲಾಗಿದ್ದು ಬಾಕಿ ಮನೆಗಳ ಸವರ್ೇ ಕಾರ್ಯ ಮುಗಿದರೂ ತಂತ್ರಾಂಶದಲ್ಲಿ ಅಪ್ಲೋಡ್ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ನಲ್ಲಿ ಉಳಿದು ಕೊಂಡಿದ್ದಾರೇ ಎಂಬುದನ್ನು ತೀವ್ರ ನಿಗಾವಹಿಸಬೇಕು. ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ತಂತ್ರಾಂಶದಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲು ಸೂಚನೆ ನೀಡಿದರು. ಇವರ ಕಾಂಟ್ಯಾಕ್ಟ್ಗಳ ಮೇಲೆ ನಿಗಾವಹಿಸಿ 14 ದಿನ ಸರಿಯಾಗಿ ವಾಚ್ ಮಾಡಬೇಕು. 

      ಒಂದೊಮ್ಮೆ ಇವರನ್ನು ಕ್ವಾರಂಟೈನ್ನಲ್ಲಿಂದ ಬೇರೆಡೆ ತಿರುಗಾಡಿದರೆ ಅಪಾಯ ಎದುರಾಗಬಹುದು. ಈ ಕುರಿತಂತೆ ತೀವ್ರ ನಿಗಾವಹಿಸಲು ನಿಯೋಜಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಅವರು ಮಾತನಾಡಿ, ಜಿಲ್ಲೆಯಲ್ಲಿ 4508 ಜನರ ಪೈಕಿ 4140 ಜನ ಹೋಂ ಕ್ವಾರಂಟೈನ್  ಹಾಗೂ 380 ಜನ ಸಾಂಸ್ಥಿಕ  ಕ್ವಾರಂಟೈನ್ನಲ್ಲಿದ್ದಾರೆ.

  ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಮೇ ಕೊನೆಯವರೆಗೂ ಮುಂದುವರೆಯಬಹುದು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಕಾಮರ್ಿಕ ಅಧಿಕಾರಿ ಶ್ರೀಮತಿ ಲಲಿತಾ ಸಾತೇನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ್, ಸಮಾಜ ಕಲ್ಯಾಣ ಅಧಿಕಾರಿ ಶ್ರೀಮತಿ ಚೈತ್ರಾ,  ಜಿಲ್ಲಾ ಡ್ರಗ್ ಕಂಟ್ರೋಲ್ ಅಧಿಕಾರಿ ಹಾಗೂ ವಿಡಿಯೋ ಸಂವಾದದಲ್ಲಿ ಸವಣೂರು ಉಪವಿಭಾಗಾಧಿಕಾರಿ ಸೇರಿದಂತೆ ಆಯಾ ತಾಲೂಕು ತಹಶೀಲ್ದಾರಗಳು ಉಪಸ್ಥಿತರಿದ್ದರು.